‘ನಿನ್ನ ಜಾತಿಯವರಿಗೆ ಕ್ಷೌರ ಮಾಡಲ್ಲ’ ಎಂದು ಯುವಕನನ್ನು ಕತ್ತರಿಯಿಂದ ಇರಿದುಕೊಂದ ಪಾಪಿ! - Mahanayaka

‘ನಿನ್ನ ಜಾತಿಯವರಿಗೆ ಕ್ಷೌರ ಮಾಡಲ್ಲ’ ಎಂದು ಯುವಕನನ್ನು ಕತ್ತರಿಯಿಂದ ಇರಿದುಕೊಂದ ಪಾಪಿ!

koppala
18/08/2024

ಕೊಪ್ಪಳ: ಜಾತಿಯ ಕಾರಣಕ್ಕಾಗಿ ಯುವಕನಿಗೆ ಕ್ಷೌರ ಮಾಡಲು ನಿರಾಕರಿಸಿದ್ದಲ್ಲದೇ, ಆತನನ್ನು ಕತ್ತರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ನಡೆದಿದೆ.


Provided by

ಪರಿಶಿಷ್ಟ ಜಾತಿಗೆ ಸೇರಿದ ಯಮನೂರಪ್ಪ ಈರಪ್ಪ ಬಂಡಿಹಾಳ ಹತ್ಯೆಗೀಡಾದ ಯುವಕ ಎಂದು ಗುರುತಿಸಲಾಗಿದೆ. ಸೆಲೂನ್ ಮಾಲಿಕ ಮುದುಕಪ್ಪ ಅಂದಪ್ಪ ಹಡಪದ ಎಂಬಾತ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.

ಯಮನೂರಪ್ಪ ಕ್ಷೌರ ಮಾಡಿಸಿಕೊಳ್ಳಲು ಸೆಲೂನ್ ಗೆ ಹೋಗಿದ್ದರು. ಈ ವೇಳೆ ಸೆಲೂನ್ ಮಾಲಿಕ ಮುದುಕಪ್ಪ, ನಿನ್ನ ಜಾತಿಯವರಿಗೆ ಕ್ಷೌರ ಮಾಡುವುದಿಲ್ಲ ಎಂದು ಅವಮಾನಿಸಿದ್ದಾನೆ. ಇದರಿಂದ ನೊಂದ ಯಮನೂರಪ್ಪ ಜಾತಿ ಅಸಮಾನತೆಯನ್ನ ಪ್ರಶ್ನೆ ಮಾಡಿದ್ದು, ಈ ವೇಳೆ ಮುದುಕಪ್ಪ ಮನುವಾದೀಯ ವರ್ತನೆ ತೋರಿದ್ದು, ಕತ್ತರಿಯಿಂದ ಯಮನೂರಪ್ಪನವರ ಹೊಟ್ಟೆಗೆ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಸಂಗನಾಳ ಗ್ರಾಮದಲ್ಲಿ ಪರಿಶಿಷ್ಟರ ಮೇಲೆ ಅಸ್ಪೃಶ್ಯತಾ ಆಚರಣೆ ನಡೆಸಲಾಗ್ತಿದೆ. ಇಲ್ಲಿ ಹೇರ್ ಕಟ್ ಮಾಡಿಕೊಳ್ಳಬೇಕಾದ್ರೆ ಜನರು ಪಕ್ಕದ ಯಲಬುರ್ಗಾ ತಾಲೂಕಿಗೆ ಹೋಗಬೇಕಂತೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳಾದರೂ ಜಾತಿ ಅಸಮಾನತೆಯನ್ನು ತೊಡೆದು ಹಾಕುವ ಯೋಗ್ಯತೆ ಸರ್ಕಾರಗಳಿಗಾಗಲಿ, ಅಧಿಕಾರಿಗಳಿಗಾಗಲಿ ಇಲ್ಲವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ