ಯುವತಿಗೆ 4 ವರ್ಷಗಳಿಂದ ಕಿರುಕುಳ: ಹಿಂದೂ ಮುಖಂಡನ ವಿರುದ್ಧ ಎಫ್ ಐಆರ್ - Mahanayaka
5:24 PM Wednesday 20 - August 2025

ಯುವತಿಗೆ 4 ವರ್ಷಗಳಿಂದ ಕಿರುಕುಳ: ಹಿಂದೂ ಮುಖಂಡನ ವಿರುದ್ಧ ಎಫ್ ಐಆರ್

balakrishna
02/06/2025


Provided by

ಮಂಡ್ಯ: ಮದುವೆಯಾಗಲು ನಿರಾಕರಿಸಿದ ಯುವತಿಯ ಬಗ್ಗೆ ಅಪಪ್ರಚಾರ ಮಾಡುತ್ತಾ, ಆಕೆಗೆ ನಾಲ್ಕು ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡಿ, ಆಕೆಗೆ ನಿಶ್ಚಯವಾಗುತ್ತಿದ್ದ ಮದುವೆಗಳನ್ನು ರದ್ದುಪಡಿಸಿದ್ದಲ್ಲದೇ ಆ್ಯಸಿಡ್ ದಾಳಿ ಮಾಡುವ ಬೆದರಿಕೆಯೊಡ್ಡಿದ ಆರೋಪದಲ್ಲಿ ಹಿಂದೂ ಮುಖಂಡನೊಬ್ಬನ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಹಿಂದೂ ಮುಖಂಡ ಚಿಕ್ಕಬಳ್ಳಿ ಬಾಲಕೃಷ್ಣ ವಿರುದ್ಧ ಮಂಡ್ಯದ ಕೆರಗೋಡು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ಕು ವರ್ಷಗಳ ಹಿಂದೆ ಸಂತ್ರಸ್ತೆ ಹಾಗೂ ಬಾಲಕೃಷ್ಣಗೆ ಮದುವೆ ನಿಶ್ಚಯವಾಗಿತ್ತು. ಈ ವೇಳೆ ಸಂತ್ರಸ್ತೆ ಜೊತೆಗೆ ಬಾಲಕೃಷ್ಣ ಫೋಟೋ ತೆಗೆಸಿಕೊಂಡಿದ್ದ. ಆದ್ರೆ ಹಲವು ಸುಳ್ಳುಗಳನ್ನು ಹೇಳಿ ಬಾಲಕೃಷ್ಣ ಮದುವೆ ಮಾಡಿಕೊಳ್ಳಲು ಮುಂದಾಗಿರುವುದು ಸಂತ್ರಸ್ತೆಯ ಅರಿವಿಗೆ ಬಂದಿತ್ತು. ಹೀಗಾಗಿ ಮದುವೆ ನಿರಾಕರಿಸಿದ್ದರು.

ಇದರಿಂದ ಕೆರಳಿದ ಬಾಲಕೃಷ್ಣ ಸಂತ್ರಸ್ತೆಗೆ ಬರುತ್ತಿದ್ದ ಮದುವೆ ಪ್ರಸ್ತಾಪಗಳನ್ನು ತಪ್ಪಿಸುತ್ತಿದ್ದು, ಹಳೆಯ ಫೋಟೋ ತೋರಿಸಿ ಚಾಡಿ ಹೇಳಿ ವಿವಾಹ ರದ್ದುಪಡಿಸುತ್ತಿದ್ದ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ, ಆ್ಯಸಿಡ್ ಎರಚುವುದಾಗಿ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಾಲಕೃಷ್ಣನಿಂದ ರಕ್ಷಣೆ ಕೋರಿ ಹಾಗೂ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತೆ ಮನವಿ ಮಾಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ