ಯುವತಿಯ ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ 2ನೇ ವಿವಾಹ | ಆರೋಪಿಯ ಬಂಧನ
ಎತ್ತುಮನೂರ್: ಮೊದಲನೇ ವಿವಾಹವನ್ನು ಮರೆಮಾಚಿ, ಮತ್ತೋರ್ವಳು ಯುವತಿಯನ್ನು ಬ್ಲ್ಯಾಕ್ ಮೇಲ್ ಮಾಡಿ, ವ್ಯಕ್ತಿಯೋರ್ವ ಎರಡನೇ ವಿವಾಹವಾಗಿದ್ದು, ಇದೀಗ ಕೊಟ್ಟಾಯಂನ ಒನಮತುರುತ್ ಎಂಬ ಮಹಿಳೆ ನೀಡಿದ ದೂರಿನಂತೆ ಆರೋಪಿಯನ್ನು ಬಂಧಿಸಲಾಗಿದೆ.
ಕಾಸರಗೋಡು ಮೂಲದ ವಿನೋದ್ ವಿಜಯನ್(38) ಬಂಧಿತ ಆರೋಪಿಯಾಗಿದ್ದಾನೆ. ಈತ ಆನ್ ಲೈನ್ ವೆಬ್ ಸೈಟ್ ಮೂಲಕ ಮದುವೆ ಪ್ರಸ್ತಾಪ ಸ್ವೀಕರಿಸಿ, ಮೂರು ತಿಂಗಳ ಹಿಂದೆಯಷ್ಟೆ ಕುರುಮಲ್ಲೂರು ದೇವಸ್ಥಾನದಲ್ಲಿ ಯುವತಿಯೊಬ್ಬಳನ್ನು ವಿವಾಹವಾಗಿದ್ದಾನೆ.
ವಿನೋದ್ ವಿವಾಹ ವಾದ ವಿಚಾರವನ್ನು ಹಾಗೂ ಫೋಟೋವನ್ನು ವಿನೋದ್ ನ ಸ್ನೇಹಿತರು ಆತನ ಮೊದಲ ಪತ್ನಿಗೆ ಕಳುಹಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತನ್ನ ಮೋಸದಾಟ ತಿಳಿದಿದೆ ಎನ್ನುವುದು ವಿನೋದ್ ಗೂ ತಿಳಿದಿದ್ದು, ಆತ ತಕ್ಷಣವೇ ತನ್ನ ಎರಡನೇ ಪತ್ನಿಯನ್ನು ಚೆಂಗನೂರಿನಿಂದ ಕರೆದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ.
ಈ ನಡುವೆ ವಿನೋದ್ ನ ಮೊದಲ ಪತ್ನಿ, ಎರಡನೇಯ ಪತ್ನಿಯ ಸಂಬಂಧಿಕರನ್ನು ಸಂಪರ್ಕಿಸಿ ವಿನೋದ್ ನ ಬಣ್ಣ ಬಯಲು ಮಾಡಿದ್ದಾಳೆ. ಆಗ ತಕ್ಷಣವೇ ಆಕೆಯ ಪೋಷಕರು ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಎರಡನೇ ಪತ್ನಿಯನ್ನು ಕರೆದುಕೊಂಡು ಕಾಸರಗೋಡಿನಲ್ಲಿ ತಲೆ ಮರೆಸಿಕೊಂಡಿದ್ದ ವಿಜಯ್ ನನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ಯುವತಿಗೆ ವಂಚನೆ ಮಾಡಿರುವುದು, ಆಕೆಯ ನಗ್ನ ಚಿತ್ರವನ್ನು ತೋರಿಸಿ ಬ್ಲ್ಯಾಕ್ ಮೇಲ್ ಮಾಡಿರುವುದು, 1,46,000 ಬೆಲೆ ಬಾಳುವ ಚಿನ್ನವನ್ನು ಅಪಹರಿಸಿದ್ದು, ಪರಿಶಿಷ್ಟ ಜಾತಿ ದೌರ್ಜನ್ಯ ಮೊದಲಾದ ಪ್ರಕರಣಗಳನ್ನು ವಿನೋದ್ ಮೇಲೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.