ಕೆಲಸ ಸಿಕ್ಕಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹರಕೆ ಹೇಳಿದ ಯುವಕ ಆತ್ಮಹತ್ಯೆ! - Mahanayaka
6:13 AM Friday 30 - September 2022

ಕೆಲಸ ಸಿಕ್ಕಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹರಕೆ ಹೇಳಿದ ಯುವಕ ಆತ್ಮಹತ್ಯೆ!

01/11/2020

ಚೆನ್ನೈ: ಕೆಲಸ ಸಿಕ್ಕಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು  ವ್ಯಕ್ತಿಯೊಬ್ಬ ಹರಕೆ ಹೇಳಿದ್ದು, ಆತನಿಗೆ ಕೆಲಸ ಸಿಕ್ಕಿದ ಬಳಿಕ ಹರಕೆಯನ್ನು ತೀರಿಸಲು ಆತ್ಮಹತ್ಯೆ ಮಾಡಿಕೊಂಡಿದ್ದಾನೆ,


ಈ ವಿಲಕ್ಷಣ ಘಟನೆ ನಡೆದಿರುವುದು ತಿರುವನಂತಪುರಂನಲ್ಲಿ. ತಮಿಳುನಾಡಿನ ನಾಗರ್ ಕೊಯಿಲ್ ನಿವಾಸಿ ನವೀನ್ (32) ಈ ಹುಚ್ಚಾಟ ಮೆರೆದ ಯುವಕನಾಗಿದ್ದಾನೆ. ತನಗೆ ಒಳ್ಳೆಯ ಉದ್ಯೋಗ ಸಿಕ್ಕಿದರೆ ನಾನು ನಿನ್ನೊಂದಿಗೆ ನಿನ್ನಲ್ಲಿಗೇ ಬರುತ್ತೇನೆ ಎಂದು ನವೀನ್ ಹರಕೆ ಹೇಳಿದ್ದನೆನ್ನಲಾಗಿದೆ. ಇದಾಗಿ ಕೆಲವೇ ದಿನಗಳಲ್ಲಿ ಬ್ಯಾಂಕ್ ಆಫ್ ಬರೋಡದಲ್ಲಿ ಅವನಿಗೆ ಕೆಲಸ ಸಿಕ್ಕಿದೆ.


ಕೆಲಸ ಸಿಕ್ಕಿ 15 ದಿನ ಕೆಲಸ ಮಾಡಿದ ಬಳಿಕ ನವೀನ್, ಇಲ್ಲಿನ ರೈಲು ನಿಲ್ದಾಣವೊಂದರ ಸಮೀಪ ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ನಾನು ದೇವರಿಗೆ ಹೇಳಿರುವ ಹರಕೆಯನ್ನು ತೀರಿಸಲು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.


ಇನ್ನೂ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನವೀನ್ ನ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಈ ಘಟನೆಗೆ ಬೇರೇನಾದರೂ ಕಾರಣಗಳಿವೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಈ ಡೆತ್ ನೋಟ್ ಹಿಂದೆ ಹಲವು ಅನುಮಾನಗಳೂ ಕೇಳಿ ಬಂದಿವೆ.


Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ