ಟ್ರಕ್ಕಿಂಗ್‌ ಗೆ ಬಂದಿದ್ದ ಯುವಕ ನಾಪತ್ತೆ: ಯುವಕನ ಮೊಬೈಲ್‌, ಟೀ ಶರ್ಟ್‌, ಸ್ಲಿಪ್ಪರ್‌ ಪತ್ತೆ! - Mahanayaka
1:06 PM Wednesday 15 - October 2025

ಟ್ರಕ್ಕಿಂಗ್‌ ಗೆ ಬಂದಿದ್ದ ಯುವಕ ನಾಪತ್ತೆ: ಯುವಕನ ಮೊಬೈಲ್‌, ಟೀ ಶರ್ಟ್‌, ಸ್ಲಿಪ್ಪರ್‌ ಪತ್ತೆ!

bharath
09/12/2023

ಕೊಟ್ಟಿಗೆಹಾರ:  ಬೆಂಗಳೂರಿನಿಂದ ಟ್ರಕ್ಕಿಂಗ್ ಬಂದಿದ್ದ ಯುವಕ ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯಲ್ಲಿ ನಡೆದಿದೆ.


Provided by

ಬೆಂಗಳೂರಿನಿಂದ ಬಂದಿದ್ದ ಭರತ್ ಎಂಬ ಯುವಕ ನಾಪತ್ತೆಯಾಗಿರುವ ಯುವಕನಾಗಿದ್ದಾನೆ. ದುರ್ಗದಹಳ್ಳಿಯ ಗುಡ್ಡದಲ್ಲಿರೋ ರಾಣಿಝರಿ ಪಾಯಿಂಟ್ ನಲ್ಲಿ ಬೈಕ್ ನಿಲ್ಲಿಸಿರೋ ಭರತ್‌ ಬಳಿಕ ನಾಪತ್ತೆಯಾಗಿದ್ದಾನೆ.

ಗುಡ್ಡದ ತುದಿಯಲ್ಲಿ ಭರತ್‌ ನ ಟೀ ಶರ್ಟ್, ಮೊಬೈಲ್, ಸ್ಲಿಪರ್ ಪತ್ತೆಯಾಗಿವೆ.  ಬಿ.ಇ ಮುಗಿಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭರತ್ ನನ್ನು  3 ತಿಂಗಳ ಸಂಬಳ ನೀಡಿ  ಕಂಪೆನಿ ಕೆಲಸದಿಂದ ತೆಗೆದುಹಾಕಿತ್ತು ಎನ್ನಲಾಗಿದೆ.

ಬೆಂಗಳೂರಿನಿಂದ ಹಾರ್ನೆಟ್ ಬೈಕ್ ನಲ್ಲಿ ದುರ್ಗದಹಳ್ಳಿಗೆ ಬಂದಿದ್ದ ಭರತ್  ಮೊನ್ನೆಯಿಂದ ಮಿಸ್ಸಿಂಗ್ ಆಗಿದ್ದಾನೆ. ಹೀಗಾಗಿ ಭರತ್‌ ನನ್ನು ಹುಡುಕಿಕೊಂಡು ಪೋಷಕರು ಬಂದಿದ್ದಾರೆ.  ಬಾಳೂರು ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಭರತ್‌ ನ ಪತ್ತೆಗಾಗಿ ನಾಳೆಯಿಂದ ಶೋಧ ಕಾರ್ಯಾಚರಣೆ ನಡೆಸಲಿದ್ದಾರೆ.

ಇತ್ತೀಚಿನ ಸುದ್ದಿ