2 ವರ್ಷಗಳ ಬಳಿಕ ಪುನೀತ್ ರಾಜ್ ಕುಮಾರ್ ಚಿತ್ರ ತೆರೆಗೆ | ಯುವರತ್ನಗೆ ಅಭಿಮಾನಿಗಳ ಸ್ವಾಗತ ಹೇಗಿತ್ತು? - Mahanayaka

2 ವರ್ಷಗಳ ಬಳಿಕ ಪುನೀತ್ ರಾಜ್ ಕುಮಾರ್ ಚಿತ್ರ ತೆರೆಗೆ | ಯುವರತ್ನಗೆ ಅಭಿಮಾನಿಗಳ ಸ್ವಾಗತ ಹೇಗಿತ್ತು?

yuvarathna
01/04/2021


Provided by

ಬೆಂಗಳೂರು: ಪೊಗರು, ರಾಬರ್ಟ್ ಬಳಿಕ ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ “ಯುವರತ್ನ” ಚಿತ್ರ ಇಂದಿನಿಂದ ತೆರೆಯ ಮೇಲೆ ಅಬ್ಬರಿಸಲಿದೆ. 2 ವರ್ಷಗಳ ಬಳಿಕ ಪುನೀತ್ ಅವರ ಚಿತ್ರ ಬಿಡುಗಡೆಯಾಗುತ್ತಿದೆ.

ಬೆಳಗ್ಗೆ 5 ಗಂಟೆಯಿಂದಲೇ ಪುನೀತ್ ಅಭಿಮಾನಿಗಳು ಥಿಯೇಟರ್ ಗಳಿಗೆ ಭೇಟಿ ನೀಡಿದ್ದು, ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ.  ಇನ್ನೂ ಬಹುತೇಕ ಚಿತ್ರಮಂದಿರಗಳಲ್ಲಿ ಈಗಾಗಲೇ ಮೂರು ದಿನಗಳ ಟಿಕೆಟ್ ಮಾರಾಟವಾಗಿದೆ.

ಕನ್ನಡ, ತೆಲುಗು ಭಾಷೆಗಳಲ್ಲಿ ಸುಮಾರು 600 ಥಿಯೇಟರ್ ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ವಿದೇಶಗಳಲ್ಲಿಯೂ “ಯುವರತ್ನ” ಪ್ರದರ್ಶನ ಆರಂಭವಾಗಿದೆ. ರಾಜ್ಯದಲ್ಲಿಯೇ 400 ಚಿತ್ರಮಂದಿರಗಳಲ್ಲಿ ಯುವರತ್ನ ಪ್ರದರ್ಶನ ನಡೆಯುತ್ತಿದೆ.

ಚಿತ್ರದುರ್ಗ, ಹಾಸನ, ಶಿವಮೊಗ್ಗ, ತುಮಕೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಅಪ್ಪು ಅಭಿಮಾನಿಗಳು ಚಿತ್ರವೀಕ್ಷಣೆಗೆ ನಾ ಮುಂದು ತಾ ಮುಂದು ಎಂದು ಕಾಯುತ್ತಿರುವುದು ಕಂಡು ಬಂದಿದೆ. ಥಿಯೇಟರ್ ಗಳ ಮುಂದೆ ಪುನೀತ್ ಅವರ ಬೃಹತ್ ಕಟೌಟ್ ಗಳು ರಾರಾಜಿಸುತ್ತಿವೆ.

ಇತ್ತೀಚಿನ ಸುದ್ದಿ