10 ಲಕ್ಷ ಪಾವತಿಸಿದರೂ, ಬಾಕಿ ಪಾವತಿಸಿ ಮೃತದೇಹ ಕೊಂಡೊಯ್ಯಿರಿ ಎಂದ ಆಸ್ಪತ್ರೆ! - Mahanayaka

10 ಲಕ್ಷ ಪಾವತಿಸಿದರೂ, ಬಾಕಿ ಪಾವತಿಸಿ ಮೃತದೇಹ ಕೊಂಡೊಯ್ಯಿರಿ ಎಂದ ಆಸ್ಪತ್ರೆ!

26/12/2020

ಬೆಂಗಳೂರು: ಬಾಕಿ ಹಣ ಪಾವತಿ ಮಾಡಲಿಲ್ಲ ಎಂಬ ಕಾರಣಕ್ಕೆ ಕುಟುಂಬಸ್ಥರಿಗೆ ಮೃತದೇಹ ನೀಡದೇ ಸತಾಯಿಸಿರುವ ಘಟನೆ ನಡೆದಿದ್ದು, ಸಚಿವರ ಮಧ್ಯಪ್ರವೇಶದಿಂದ ಕುಟುಂಬಕ್ಕೆ ಇದೀಗ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.


Provided by

ಕೊರೊನಾ ಸೋಂಕಿತರಾಗಿದ್ದ ರಾಜಸ್ಥಾನ ಮೂಲದ ಭೀಮರಾವ್ ಪಾಟೀಲ್(62) ಕೊರೊನಾದಿಂದ ಮೃತಪಟ್ಟಿದ್ದರು. ಇವರು  ನವೆಂಬರ್ 15ರಂದು ಆಸ್ಪತ್ರೆಗೆ ದಾಖಲಾಗಿದ್ದು, ಡಿಸೆಂಬರ್ 23ರವರೆಗೆ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗದೇ ಸಾವನ್ನಪ್ಪಿದ್ದಾರೆ. ಮೃತರ ಪುತ್ರ, ಭೀಮರಾವ್ ಪಾಟೀಲ್ ದಾಖಲಾಗಿದ್ದ ಆಸ್ಪತ್ರೆಗೆ 10 ಲಕ್ಷ ರೂಪಾಯಿ ಪಾವತಿ ಮಾಡಿದ್ದರು. ಆದರೆ ಇನ್ನೂ 10 ಲಕ್ಷ ರೂಪಾಯಿ ಪಾವತಿ ಮಾಡಬೇಕು ಎಂದು ಆಸ್ಪತ್ರೆ ಹೇಳಿದ್ದು, ಮೃತದೇಹ ನೀಡಲು ನಿರಾಕರಿಸಿದೆ.

ಇದೀಗ ಆರೋಗ್ಯ ಸಚಿವ ಸುಧಾಕರ್ ಅವರ ಮಧ್ಯಪ್ರವೇಶದಿಂದ ಭೀಮ್ ರಾವ್ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳನ್ನು ಮನ್ನಾ ಮಾಡಿದೆ. ಮದ್ದೇ ಇಲ್ಲದ ಕೊರೊನಾ ವೈರಸ್ ಗೆ 20 ಲಕ್ಷ ರೂಪಾಯಿ ಬಿಲ್ ಹೇಗೆ ಆಗಿದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.


Provided by

 

ಇತ್ತೀಚಿನ ಸುದ್ದಿ