ಡೆಹ್ರಾಡೂನ್ ನಲ್ಲಿ 11 ಮದರಸಗಳಿಗೆ ಬೀಗ: ನೋಂದಣಿ ಮಾಡಿಲ್ಲವೆಂದು ಉತ್ತರ!

ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ 11 ಮದರಸಗಳಿಗೆ ಬೀಗ ಜಡಿಯಲಾಗಿದೆ. ಈ ಮದರಸಗಳು ರಾಜ್ಯ ಮದ್ರಸಾ ಬೋರ್ಡ್ ಅಥವಾ ಎಜುಕೇಶನ್ ಡಿಪಾರ್ಟ್ ಮೆಂಟ್ ನಲ್ಲಿ ನೋಂದಣಿಯಾಗಿಲ್ಲ ಎಂದು ಕಾರಣವನ್ನು ನೀಡಲಾಗಿದೆ.
ಇದರ ವಿರುದ್ಧ ರಾಜ್ಯದ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿವೆ. ಇದೇ ವೇಳೆ ಉತ್ತರಾಖಂಡದ ಮದರಸಾ ಬೋರ್ಡ್ ನ ಚೇರ್ಮನ್ ಮುಫ್ತಿ ಷಮೀಮ್ ಖಾಸ್ಮಿ ಅವರು ಪರೋಕ್ಷವಾಗಿ ಈ ಬೀಗ ಜಡಿಯುವಿಕೆಯನ್ನು ಸಮರ್ಥಿಸಿದ್ದಾರೆ. ಮದರಸಗಳು ಕಾನೂನನ್ನು ಪಾಲಿಸಬೇಕಾಗಿದೆ ಮತ್ತು ಮಕ್ಕಳು ಆಧುನಿಕತೆಗೆ ತೆರೆದುಕೊಳ್ಳಬೇಕಾಗಿದೆ ಎಂದವರು ಹೇಳಿದ್ದಾರೆ.
ಜಿಲ್ಲಾಧಿಕಾರಿಯ ವರದಿಯಂತೆ ಜಿಲ್ಲೆಯಲ್ಲಿ 57 ಮದರಸಗಳು ನೋಂದಣಿ ರಹಿತವಾಗಿ ಕೆಲಸ ಮಾಡುತ್ತಿವೆ . ಇದೇ ವೇಳೆ ಈ ಮದರಸಗಳಿಗೆ ಎಲ್ಲಿಂದ ಹಣ ಪಾವತಿಯಾಗುತ್ತಿದೆ ಮತ್ತು ಇದರ ಮೂಲ ಯಾವುದು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಹೇಳಿದ್ದಾರೆ.
ಇದೇ ವೇಳೆ ಈ ಬೀಗ ಜಡಿಯುವಿಕೆಯ ವಿರುದ್ಧ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿವೆ.. ಮುಸ್ಲಿಂ ಸೇವಾ ಸಂಘಟನ್ ನ ಅಧ್ಯಕ್ಷ ನಯಿಮ್ ಖುರೇಶಿ ಅವರು ಮಾತಾಡಿ, ಮದರಸಗಳನ್ನು ನಡೆಸುವುದಕ್ಕೆ ನೋಂದಣಿಯ ಅಗತ್ಯ ಇಲ್ಲ. ಈ ಮದ್ರಸಗಳಿಗೆ ಬೀಗ ಜಡಿಯುವ ಮೊದಲು ನಮಗೆ ಯಾವುದೇ ಸೂಚನೆಯನ್ನು ನೀಡಿಲ್ಲ. ನೋಟಿಸ್ ಕೊಟ್ಟಿಲ್ಲ. ಅಲ್ಲದೇ ಡೆಹ್ರಾಡೂನ್ ನ ಮಸೀದಿಗೂ ಅಧಿಕಾರಿಗಳು ಬೀಗ ಜಡಿದಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಉತ್ತರಾಖಂಡದ 13 ಜಿಲ್ಲೆಗಳ ಮದರಸಗಳ ಬಗ್ಗೆಯೂ ತನಿಖೆ ನಡೆದಿದೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj