ಇಫ್ತಾರ್ ಹಿನ್ನೆಲೆ: ಮಸೀದಿಗಳಿಗೆ ಉಚಿತ ಅಕ್ಕಿ ನೀಡುತ್ತೇವೆ ಎಂದ ತಮಿಳುನಾಡು ಸರಕಾರ

ಇಫ್ತಾರ್ ಅಥವಾ ಉಪವಾಸ ಪಾರಣೆಗಾಗಿ ಆಹಾರ ತಯಾರಿಸುವುದಕ್ಕೆ ಬೇಕಾದ ಅಕ್ಕಿಯನ್ನು ಉಚಿತವಾಗಿ ಎಲ್ಲಾ ಮಸೀದಿಗಳಿಗೆ ನೀಡುವುದಾಗಿ ತಮಿಳುನಾಡು ಸರಕಾರ ಘೋಷಿಸಿದೆ.
ತಮಿಳುನಾಡಿನ ನಗರ ಗ್ರಾಮ ಮತ್ತು ಹಳ್ಳಿಗಳಲ್ಲಿರುವ ಎಲ್ಲಾ ಮಸೀದಿಗಳು ಕೂಡ ಈ ಉಚಿತ ಅಕ್ಕಿಯನ್ನು ಪಡೆಯಲಿವೆ. ಇದಕ್ಕಾಗಿ ಒಟ್ಟು 18 ಕೋಟಿ 41 ಲಕ್ಷ ರೂಪಾಯಿಯನ್ನು ತಮಿಳುನಾಡು ಸರಕಾರ ಖರ್ಚು ಮಾಡಲಿದೆ ಎಂದು ತಿಳಿದು ಬಂದಿದೆ.
ಇದಕ್ಕಾಗಿ 7920 ಮೆಟ್ರಿಕ್ ಟನ್ ಅಕ್ಕಿಯನ್ನು ಮಸೀದಿಗಳಿಗೆ ನೀಡಲಾಗುತ್ತದೆ. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಪ್ರತಿ ಮಸೀದಿಗಳಿಗೂ ಸಮರ್ಪಕ ರೀತಿಯಲ್ಲಿ ಅಕ್ಕಿ ಪೂರೈಕೆ ಆಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಕೂಡ ಅಧಿಕಾರಿಗಳಿಗೆ ನೀಡಲಾಗಿದೆ.
ತಮಿಳುನಾಡಿನಲ್ಲಿ ಮಾರ್ಚ್ 2ರಂದು ರಂಜಾನ್ ಉಪವಾಸ ಆರಂಭವಾಗಿದೆ.. ಮುಂಜಾನೆಯಿಂದ ಮುಸ್ಸಂಜೆಯವರೆಗೆ ಒಂದು ತಿಂಗಳು ಪೂರ್ತಿ ಮುಸ್ಲಿಮರು ಅನ್ನ ಆಹಾರವನ್ನು ಸೇವಿಸದೆ ಉಪವಾಸ ಆಚರಿಸುತ್ತಾರೆ. 30 ಉಪವಾಸಗಳ ಬಳಿಕ ಅವರು ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆ ಈದುಲ್ ಫಿತರ್ ಎಂದು ಹೇಳಲಾಗುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj