ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿ ಹೌಸ್ ಎಂಬ ಪ್ರದರ್ಶನಕ್ಕೆ ಚಾಲನೆ: ವಿಶೇಷತೆ ಏನ್ ಗೊತ್ತೇ?

ಪ್ರವಾದಿ ಇಬ್ರಾಹಿಮರ ಕಾಲದಿಂದ ಆರಂಭವಾಗಿ ಈವರೆಗೆ ವಿವಿಧ ಕಾಲಘಟ್ಟಗಳಲ್ಲಿ ಕಾಬಾದ ನಿರ್ಮಾಣ, ಪುನರ್ ನಿರ್ಮಾಣ ಇತ್ಯಾದಿಗಳ ಕಡೆಗೆ ಬೆಳಕು ಚೆಲ್ಲುವ ಫಸ್ಟ್ ಹೌಸ್ ಎಂಬ ಪ್ರದರ್ಶನಕ್ಕೆ ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿ ಚಾಲನೆ ನೀಡಲಾಗಿದೆ.
ಮಸ್ಜಿದುಲ್ ಹರಾಂನ ಮೂರನೇ ಅಂತಸ್ತಿನಲ್ಲಿರುವ ನಿರ್ದಿಷ್ಟ ಭಾಗದಲ್ಲಿ ಈ ಇತಿಹಾಸದ ಮರು ನಿರೂಪಣೆಯ ದೃಶ್ಯಗಳುಳ್ಳ ಪ್ರದರ್ಶನವನ್ನು ಮಾಡಲಾಗುತ್ತದೆ.
ಇಲ್ಲಿ ಈ ಕುರಿತಾದ ದೃಶ್ಯಗಳು, ಮೂವಿ ಗ್ರಾಫಿಕ್ಸ್ ಗಳ ಮೂಲಕ ಐತಿಹಾಸಿಕ ಕಲಾಪ್ರಕಾರಗಳು ಇತ್ಯಾದಿಗಳನ್ನು ಪ್ರದರ್ಶಿಸಲಾಗುತ್ತದೆ. ಕಾಬಾದ ಐತಿಹಾಸಿಕ ಘಟನಾವಳಿಗಳನ್ನು ಬಿಂಬಿಸುವ ಈ ಪ್ರದರ್ಶನವು 10 ಭಾಷೆಗಳಲ್ಲಿ ಇರಲಿದೆ ಮತ್ತು ಕಾಬಾಕ್ಕೆ ಭೇಟಿ ಕೊಡುವ ವಿದೇಶಿ ಯಾತ್ರಿಕರು ಮತ್ತು ಇತರರಿಗೆ ಇದನ್ನು ವೀಕ್ಷಿಸುವ ಅವಕಾಶವನ್ನು ನೀಡಲಾಗುತ್ತದೆ ಇಂಗ್ಲಿಷ್ ಮತ್ತು ಅರಬ್ಬಿ ಭಾಷೆಯಲ್ಲಿ ವಿವರಣೆಯನ್ನು ಕೂಡ ನೀಡಲಾಗುತ್ತದೆ.
ಕಾಬಾದ ವಿವಿಧ ವಿಶೇಷತೆಗಳನ್ನು ತಿಳಿಸುವ ಹಲವು ಪ್ರಮುಖ ವಿಷಯಗಳು ಕೂಡ ಈ ಪ್ರದರ್ಶನದಲ್ಲಿ ಒಳಗೊಂಡಿದೆ
ಪ್ರವಾದಿ ಆದಮ್ ರಿಂದ ನಿರ್ಮಾಣವಾಗಿರುವ ಕಾಬಾ ಆ ಬಳಿಕದ ಕಾಲಘಟ್ಟದಲ್ಲಿ ವಿವಿಧ ಹೊಡೆತಗಳು ತಿನ್ನುತ್ತಾ ಬಂದಿದೆ. ಪ್ರವಾದಿ ಇಬ್ರಾಹಿಂ ಮ್ ರು ಈ ಕಾಬಾದ ಪುನರ್ ನಿರ್ಮಾಣ ಮಾಡಿದರು. ಅದಕ್ಕಾಗಿ ಅವರ ಮಗ ಇಸ್ಮಾಯಿಲ್ ಅವರು ಸಹಕರಿಸಿದರು.
ಅವರ ಕರೆಯನ್ನು ಅನುಸರಿಸಿ ಪ್ರತಿ ವರ್ಷ ಜಗತ್ತಿನಾದ್ಯಂತದಿಂದ ಜನರು ಮಕ್ಕಾಕ್ಕೆ ಹಜ್ ನಿರ್ವಹಿಸುವುದಕ್ಕಾಗಿ ಹೋಗ್ತಾರೆ. ಅಲ್ಲಿ ವಿವಿಧ ಕರ್ಮಗಳಲ್ಲಿ ಭಾಗಿಯಾಗುತ್ತಾರೆ. ಪ್ರವಾದಿ ಮುಹಮ್ಮದರ ಜನನಕ್ಕಿಂತ ವರ್ಷಗಳ ಮೊದಲು ಈ ಕಾಬಾದ ಮೇಲೆ ಅಬ್ರಹಾಂ ಎಂಬ ರಾಜ ದಂಡೆತ್ತಿ ಬಂದಿದ್ದ. ಆದರೆ ಆತ ಪವಾಡ ಸದೃಶವಾಗಿ ಸೋಲೊಪ್ಪಿಕೊಂಡಿದ್ದ. ಅವನ ಸೇನೆಯ ಮೇಲೆ ಹಕ್ಕಿಗಳು ದಾಳಿ ಮಾಡಿರುವುದು ಐತಿಹಾಸಿಕ ದಾಖಲೆಗಳಿಂದ ತಿಳಿದು ಬರುತ್ತದೆ.. ಹೀಗೆ ಕಾಬಾ ಎದುರಿಸ್ತಾ ಬಂದಿರುವ ಸವಾಲುಗಳು ನವೀಕರಣಗಳು ಮತ್ತು ಪುನರ್ ನಿರ್ಮಾಣಗಳ ಕಡೆಗೆ ಈ ಪ್ರದರ್ಶನದಲ್ಲಿ ಬೆಳಕು ಚೆಲ್ಲಲಾಗುವುದು. ಹಾಗೆಯೇ ಈ ಕಾಬಾ ನಿರ್ಮಾಣಕ್ಕೆ ಬಳಸಲಾದ ವಿವಿಧ ರೀತಿಯ ಸಲಕರಣೆಗಳು ಉಪಕರಣಗಳ ಪ್ರದರ್ಶನ ಕೂಡ ಇದರಲ್ಲಿ ಇರಲಿದೆ.
ಪ್ರತಿ ವರ್ಷ ಕಾಬಾಕ್ಕೆ ಹೊದಿಸಲಾಗುವ ಕಿಸ್ವ ಎಂಬ ಹೆಸರಿನ ಬಟ್ಟೆಯ ಹಿನ್ನೆಲೆಯನ್ನು ಕೂಡ ಈ ಪ್ರದರ್ಶನದಲ್ಲಿ ತಿಳಿಸಲಾಗುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj