ಗಾಝಾವನ್ನು ವಶಪಡಿಸುತ್ತೇನೆ ಎಂದ ಅಮೆರಿಕದ ಅಧ್ಯಕ್ಷ: ಟ್ರಂಪ್ ಗೆ ಗುದ್ದು ನೀಡುತ್ತಾ ಈಜಿಪ್ಟ್ ಈ‌ ಪ್ಲ್ಯಾನ್? - Mahanayaka

ಗಾಝಾವನ್ನು ವಶಪಡಿಸುತ್ತೇನೆ ಎಂದ ಅಮೆರಿಕದ ಅಧ್ಯಕ್ಷ: ಟ್ರಂಪ್ ಗೆ ಗುದ್ದು ನೀಡುತ್ತಾ ಈಜಿಪ್ಟ್ ಈ‌ ಪ್ಲ್ಯಾನ್?

06/03/2025


Provided by

ಗಾಝಾವನ್ನು ವಶಪಡಿಸುತ್ತೇನೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಗೆ ಈಜಿಪ್ಟ್ ಬದಲಿ ಯೋಜನೆಯನ್ನು ಪ್ರಸ್ತಾಪಿಸಿದೆ. ಗಾಝಾದಿಂದ ಹಮಾಸನ್ನು ಹೊರಗಿಡುವುದು ಈಜಿಪ್ಟಿನ ಯೋಜನೆಯ ಮುಖ್ಯ ಭಾಗವಾಗಿದೆ. ಗಾಝಾದಲ್ಲೀಗ ಹಮಾಸ್ ಆಡಳಿತ ವಿದ್ದು ಇದರ ಬದಲು ಅರಬ್ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ನಿಯಂತ್ರಣದ ಮಧ್ಯಂತರ ಸರಕಾರವನ್ನು ಗಾಝಾದಲ್ಲಿ ಸ್ಥಾಪಿಸುವುದು ಈ ಯೋಜನೆಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.


Provided by

ಇತ್ತೀಚಿಗೆ ಈಜಿಪ್ಟಿನ ಕೈರೋದಲ್ಲಿ ನಡೆದ ಅರಬ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮುಂದಿಡಲಾಗಿದೆ. ಈ ಪ್ರಸ್ತಾಪನೆಯ ಮೇಲೆ ಸೌದಿ ಅರೇಬಿಯಾ ಯುಎಇ ಮತ್ತು ಜೋರ್ಡಾನ್ ಗಳು ಚರ್ಚೆ ನಡೆಸಿವೆ.

ಫೆಲೆಸ್ತೀನಿ ಯರನ್ನು ಅಲ್ಲಿಂದ ಬೇರೆಡೆಗೆ ಸಾಗಿಸಿ ಗಾಝಾವನ್ನು ಪ್ರವಾಸಿ ತಾಣವನ್ನಾಗಿ ಮಾಡುವೆ ಎಂದು ಈ ಮೊದಲು ಟ್ರಂಪ್ ಹೇಳಿದ್ದರು . ಗಾಝಾದ ಜನರನ್ನು ಜೋರ್ಡಾನ್ ಮತ್ತು ಈಜಿಪ್ಟ್ ಸ್ವೀಕರಿಸಬೇಕು ಎಂದು ಕೂಡ ಅವರು ಆಗ್ರಹಿಸಿದ್ದರು. ಇದಕ್ಕೆ ಅರಬ್ ಜಗತ್ತು ಒಪ್ಪಿಕೊಳ್ಳದೆ ಇರುವ ಈ ಹಂತದಲ್ಲಿ ಈಜಿಪ್ಟ್ ಈ ಪ್ರಸ್ತಾಪವನ್ನ ಮುಂದಿಟ್ಟಿದೆ.


Provided by

ಗಾಝಾದಿಂದ ಹೊರ ಹೋಗುವುದಕ್ಕೆ ಗಾಝಾದ ಮಂದಿ ಸಂತೋಷಪಡುವರು. ಅವರ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ಯಾವಾಗ ಬೇಕಾದರೂ ಕುಸಿದು ಬೀಳಬಹುದಾದ ಕಟ್ಟಡದಡಿಯಲ್ಲಿ ಅವರು ಬದುಕ್ತಿದ್ದಾರೆ. ಜಗತ್ತಿನ ಬೇರೆ ಎಲ್ಲೂ ಕೂಡ ಗಾಝಾದಂತಹ ಪರಿಸ್ಥಿತಿ ಇರಲಾರದು. ಗಾಝಾದ ಮಂದಿ ಆ ಜಾಗವನ್ನು ಬಿಟ್ಟು ಗಲ್ಪ ರಾಷ್ಟ್ರಗಳಿಗೆ ಹೋಗಲಿ.. ಗಾಝಾವನ್ನು ಸಂಪೂರ್ಣವಾಗಿ ಪುನರ್ ನಿರ್ಮಿಸುತ್ತೇನೆ. ಆದರೆ ಗಾಝಾದ ಮೇಲೆ ದೀರ್ಘಕಾಲದ ಹಕ್ಕನ್ನು ಅಮೆರಿಕಕ್ಕೆ ನೀಡಬೇಕಾಗಿದೆ ಎಂದು ಟ್ರಂಪ್ ಹೇಳಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ