ಜಾತ್ರೆಯಲ್ಲಿ ಉರುಳಿ ಬಿದ್ದ 120 ಅಡಿ ಎತ್ತರ ತೇರು!

06/04/2024
ಆನೇಕಲ್: ಜಾತ್ರೆ ವೇಳೆ ಭಕ್ತರು ಎಳೆಯುತ್ತಿದ್ದ ತೇರು ಮಗುಚಿ ಬಿದ್ದ ಘಟನೆ ಕಮ್ಮಸಂದ್ರ ಬಳಿಯ ಹೈಪರ್ ಮಾರ್ಕೆಟ್ ಬಳಿ ನಡೆದಿದೆ.
ಹುಸ್ಕೂರು ಮದ್ದುರಮ್ಮ ಜಾತ್ರೆಯಲ್ಲಿ ಭಕ್ತರು ಸುಮಾರು 120 ಅಡಿ ಎತ್ತರದ ತೇರು ಎಳೆಯುತ್ತಿದ್ದರು. ಎತ್ತು, ಟ್ರ್ಯಾಕ್ಟರ್ ಬಳಸಿ ತೇರು ಎಳೆಯಲಾಗಿತ್ತು. ಈ ವೇಳೆ ನಿಯಂತ್ರಣ ತಪ್ಪಿ ತೇರು ಉರುಳಿ ಬಿದ್ದಿದೆ.
ತೇರು ಹಿಲಲಿಗೆ ಗ್ರಾಮದಿಂದ ಹುಸ್ಕೂರಿಗೆ ಬರುತ್ತಿತ್ತು. ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿ ಬಳಿ ಬಂದಂತೆ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth