ಟಿಬೆಟ್ ನಲ್ಲಿ ಭೂಕಂಪ: 126 ಮಂದಿ ಸಾವು, 188 ಮಂದಿಗೆ ಗಾಯ - Mahanayaka
3:06 AM Tuesday 16 - September 2025

ಟಿಬೆಟ್ ನಲ್ಲಿ ಭೂಕಂಪ: 126 ಮಂದಿ ಸಾವು, 188 ಮಂದಿಗೆ ಗಾಯ

07/01/2025

ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸೇರಿದಂತೆ ಆರು ಭೂಕಂಪಗಳು ಮಂಗಳವಾರ ಒಂದು ಗಂಟೆಯಲ್ಲಿ ಟಿಬೆಟ್ ಅನ್ನು ನಡುಗಿಸಿತು.‌ ಈ ಘಟನೆಯಲ್ಲಿ ಕನಿಷ್ಠ 126 ಮಂದಿ ಸಾವನ್ನಪ್ಪಿದ್ದಾರೆ ಮತ್ತು 188 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಭಾರತ, ನೇಪಾಳ ಮತ್ತು ಭೂತಾನ್ ನ ಅನೇಕ ಪ್ರದೇಶಗಳಲ್ಲಿ ಭೂಕಂಪಗಳು ಕಟ್ಟಡಗಳನ್ನು ನಡುಗಿಸಿದವು.


Provided by

ಭೂಕಂಪದ ಕೇಂದ್ರಬಿಂದು ಟಿಬೆಟ್ ನ ಟಿಂಗ್ರಿ ಕೌಂಟಿಯಲ್ಲಿತ್ತು.
ಭೂಕಂಪದ ಕೇಂದ್ರಬಿಂದುವಿನ ಬಳಿ ಹಲವಾರು ಕಟ್ಟಡಗಳು ಕುಸಿದಿವೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. “ಡಿಂಗ್ರಿ ಕೌಂಟಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಬಹಳ ಬಲವಾದ ಭೂಕಂಪನವನ್ನು ಅನುಭವಿಸಿವೆ ಮತ್ತು ಕೇಂದ್ರಬಿಂದುವಿನ ಬಳಿಯ ಅನೇಕ ಕಟ್ಟಡಗಳು ಕುಸಿದಿವೆ” ಎಂದು ಚೀನಾದ ಸರ್ಕಾರಿ ಪ್ರಸಾರಕ ಸಿಸಿಟಿವಿ ತಿಳಿಸಿದೆ.

ದೆಹಲಿ-ಎನ್ಸಿಆರ್ ಮತ್ತು ಬಿಹಾರದ ರಾಜಧಾನಿ ಪಾಟ್ನಾ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಮತ್ತು ರಾಜ್ಯದ ಉತ್ತರ ಭಾಗದ ಅನೇಕ ಸ್ಥಳಗಳಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿಯೂ ಭೂಕಂಪದ ಅನುಭವವಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ