ಕೋಮುವಾದಿಗಳಿಂದಲೇ ದನದ ಮಾಂಸ ಮಾರಾಟ: ಯುಪಿಯಲ್ಲಿ 153 ಟನ್ ಗೋಮಾಂಸ ವಶ
ಉತ್ತರ ಪ್ರದೇಶದ ಪೊಲೀಸರು ಇತ್ತೀಚೆಗೆ 153 ಟನ್ ಗೋಮಾಂಸವನ್ನು ವಶಪಡಿಸಿರುವುದು ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಸುದ್ದಿಯೇ ಆಗಿಲ್ಲ. ಪುರನ್ ಜೋಶಿ ಅವರ ಹವಾ ನಿಯಂತ್ರಿತ ಕೊಠಡಿಯಲ್ಲಿ ಈ ಮಾಂಸವನ್ನು ಕಾದಿರಿಸಲಾಗಿತ್ತು. ನಾಲ್ಕು ಕೋಟಿ ಮೊತ್ತದ ಈ ಮಾಂಸವು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಮುಸ್ಲಿಮರನ್ನು ಗೋ ಹತ್ಯೆ ನಡೆಸುವವರು ಮತ್ತು ಗೋಮಾಂಸ ಸೇವಿಸುವವರು ಎಂದು ತೋರಿಸುವುದರ ಹಿಂದೆ ಕೋಮುವಾದಿಗಳ ಮಾಂಸ ಮಾರಾಟದ ದಂಧೆಯನ್ನು ಅಡಗಿಸುವ ಷಡ್ಯಂತ್ರ ಇದೆಯೇ ಎಂಬ ಅನುಮಾನ ಉಂಟಾಗಿದೆ.
ಹವಾ ನಿಯಂತ್ರಿತ ಕೋಣೆಯ ಮಾಲಕನಾಗಿರುವ ಪುರುನ್ ಜೋಶಿ, ಅಕ್ಷಯ್ ಸಕ್ಸೆನಾ, ಶಿವ ಶಂಕರ್, ಸಚಿನ್ ಕುಮಾರ್ ಮತ್ತು ಕುಶ್ ರುದ್ದೀನ್ ನಬಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಫಾರಿನ್ ಫಾರೆನ್ಸಿಕ್ ವರದಿಯು ಆ ಮಾಂಸ ಗೋವಿನದ್ದೆ0ದು ದೃಡಿಕರಿಸಿದೆ. ಆದರೆ ಆರಂಭದಲ್ಲಿ ಈ ಮಂದಿ ಈ ಮಾಂಸ ಎಮ್ಮೆಯದ್ದು ಎಂದು ಹೇಳಿದ್ದರು.
2024 ಮೇಯಿಂದ ಈ ಕಾನೂನುಬಾಹಿರ ಗೋಮಾಂಸ ವಧಾ ಕೇಂದ್ರ ನಡೆಯುತ್ತಿತ್ತು ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಕಾನೂನಿನ ಪ್ರಕಾರ ಗೋವನ್ನು ಹತ್ಯೆ ಮಾಡುವುದು, ಅದರ ಮಾಂಸವನ್ನು ಸಾಗಾಟ ಮಾಡುವುದು ನಿಶಿದ್ಧವಾಗಿದೆ.
ಗೋ ಹತ್ಯೆ ಮತ್ತು ಗೋಸಾಗಾಟದ ಆರೋಪವನ್ನು ಹೊರಿಸಿ 2014 ರಿಂದ ಮುಸ್ಲಿಮರ ಮೇಲೆ ದಾಳಿ ಹೆಚ್ಚಾಗಿದೆ. ಇದೇ ಆರೋಪದಲ್ಲಿ ಮುಸ್ಲಿಮರನ್ನು ಥಳಿಸಲಾಗಿದೆ ಮತ್ತು ಹತ್ಯೆ ನಡೆಸಲಾಗಿದೆ. ಇದೇ ವೇಳೆ ಆರೋಪಿಗಳು ಮುಸ್ಲಿಮರಲ್ಲ ಎಂದಾದರೆ ಅವರಿಗೆ ಗೌರವ ಪೂರ್ವಕ ಸತ್ಕಾರ ಲಭಿಸುತ್ತಿದೆ ಎಂಬ ಆರೋಪ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ. ಈ ಬಗ್ಗೆ ಇಂಡಿಯಾ ಟುಮಾರೋ ವಿಸ್ತ್ರತವಾಗಿ ವರದಿ ಮಾಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj