ಮಾರ್ಚ್ 2023 ರಿಂದ ಡಿಸೆಂಬರ್ 2024 ರ ನಡುವೆ ಅಸ್ಸಾಂ ಪೊಲೀಸರಿಂದ 21 ಭಯೋತ್ಪಾದಕರ ಬಂಧನ
ಅಸ್ಸಾಂನ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಮಾರ್ಚ್ 2023 ಮತ್ತು ಡಿಸೆಂಬರ್ 2024 ರ ನಡುವೆ 21 ಭಯೋತ್ಪಾದಕರನ್ನು ಬಂಧಿಸಿದೆ. ಅಲ್ಲದೇ 59 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಸ್ಸಾಂ ಪೊಲೀಸ್ ವಿಶೇಷ ಡಿಜಿಪಿ ಹರ್ಮೀತ್ ಸಿಂಗ್, “ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನಿರ್ದೇಶನದಲ್ಲಿ, ನಾವು ಡಿಜಿಪಿ ಜಿಪಿ ಸಿಂಗ್ ನೇತೃತ್ವದ ಎಸ್ಟಿಎಫ್ ಅನ್ನು ಪುನರುಜ್ಜೀವನಗೊಳಿಸಿದ್ದೇವೆ. ಅಸ್ಸಾಂ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪರಾಧಗಳನ್ನು ನಿಭಾಯಿಸುವುದು ಎಸ್ಟಿಎಫ್ ನ ಪ್ರಾಥಮಿಕ ಧ್ಯೇಯವಾಗಿದೆ” ಎಂದಿದ್ದಾರೆ.
ಬಂಧಿತ ಭಯೋತ್ಪಾದಕರಲ್ಲಿ ಐಸಿಸ್, ಉಲ್ಫಾ ಸದಸ್ಯರು ಮತ್ತು ಮಾವೋವಾದಿ ಸಂಘಟನೆಗಳಂತಹ ಇಸ್ಲಾಮಿಕ್ ಉಗ್ರಗಾಮಿ ಗುಂಪುಗಳ ಸದಸ್ಯರು ಸೇರಿದ್ದಾರೆ ಎಂದು ಅಸ್ಸಾಂ ಎಸ್ಟಿಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj