ಕಾಮಗಾರಿಗೆ ತೋಡಿದ್ದ ಹೊಂಡಕ್ಕೆ ಬಿದ್ದು 3 ಮಕ್ಕಳ ದಾರುಣ ಸಾವು | ಇನ್ನೂ 3-4 ಮಕ್ಕಳು ಹೊಂಡದಲ್ಲಿ ಸಿಲುಕಿರುವ ಶಂಕೆ - Mahanayaka
9:45 PM Wednesday 11 - September 2024

ಕಾಮಗಾರಿಗೆ ತೋಡಿದ್ದ ಹೊಂಡಕ್ಕೆ ಬಿದ್ದು 3 ಮಕ್ಕಳ ದಾರುಣ ಸಾವು | ಇನ್ನೂ 3-4 ಮಕ್ಕಳು ಹೊಂಡದಲ್ಲಿ ಸಿಲುಕಿರುವ ಶಂಕೆ

24/10/2020

ಹಾವೇರಿ: ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳು ಹೊಂಡಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ  ಬ್ಯಾಡಗಿಯಲ್ಲಿ ನಡೆದಿದೆ.

ಶಾಲಾ ಆವರಣದ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗಾಗಿ ತೋಡಿದ್ದ ಹೊಂಡಕ್ಕೆ ಮಕ್ಕಳು ಬಿದ್ದಿದ್ದಾರೆ. 7ರಿಂದ 8 ಮಕ್ಕಳು ಆಟವಾಡುತ್ತಿದ್ದರು ಎಂದು ತಿಳಿದು ಬಂದಿದೆ.

mahanayaka

ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಮೂರು-ನಾಲ್ಕು ಮಕ್ಕಳು ಹೊಂಡದಲ್ಲಿ ಸಿಲುಕಿದ್ದಾರೆಂಬ ಶಂಕೆ ವ್ಯಕ್ತವಾಗಿದೆ.


Provided by

ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಮೂವರು ಮಕ್ಕಳ ಮೃತದೇಹವನ್ನು ಈಗಾಗಲೇ ಹೊರ ತೆಗೆದಿದ್ದಾರೆ.  ಸ್ಥಳದಲ್ಲಿ ಮಕ್ಕಳ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ.

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ಇತ್ತೀಚಿನ ಸುದ್ದಿ