ಬಜಾರ್ ಚಿತ್ರದ ನಾಯಕ ನಟ ಧನ್ವೀರ್ ವಿರುದ್ಧ ಎಫ್ ಐ ಆರ್ ದಾಖಲು
24/10/2020
ಬೆಂಗಳೂರು: ಅತ್ತಿಗೋಡು ಆನೆ ಶಿಬಿರಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ಆನೆ ಮೇಲೆ ಕುಳಿತು ಫೋಟೋ ತೆಗೆಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಬಜಾರ್ ಚಿತ್ರದ ನಾಯಕ ನಟ ಧನ್ವೀರ್ ಗೌಡ ಹಾಗೂ ಅವರ ಸ್ನೇಹಿತರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಧನ್ವೀರ್ ಹಾಗೂ ಸ್ನೇಹಿತರಾದ ವಿಶ್ವಾಸ್ ಅಯ್ಯಂಗಾರ್, ದರ್ಶನ್ ಸೇರಿದಂತೆ ಐವರ ವಿರುದ್ಧ ಅರಣ್ಯ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅತಿಕ್ರಮವಾಗಿ ಆನೆ ಶಿಬಿರಕ್ಕೆ ಪ್ರವೇಶಿಸಿದ್ದಲ್ಲದೇ, ಆನೆಯ ಮೇಲೆ ಕುಳಿತು ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗಿತ್ತು. ಈ ಸಂಬಂಧ ಧನ್ವೀರ್ ಹಾಗೂ ಆತನ ಸ್ನೇಹಿತರಿಗೆ ಸಹಕರಿಸಿದ ಆನೆ ಮಾವುತ ಹಾಗೂ ಆನೆ ಶಿಬಿರದ ಉಸ್ತುವಾರಿ ಸಿಬ್ಬಂದಿಗೆ ಕೂಡ ನೋಟಿಸ್ ಜಾರಿಯಾಗಿದೆ ಎಂದು ತಿಳಿದು ಬಂದಿದೆ.
ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ