3 ವರ್ಷ ವಯಸ್ಸಿನ ಧನ್ವಿತಾ ನಿಮ್ಮ ನೆರವಿನ ನಿರೀಕ್ಷೆಯಲ್ಲಿ: ಚಿಕಿತ್ಸೆಗೆ ಸಹಾಯ ಮಾಡುವಿರಾ?

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಹಳ್ಳಿಕೆರೆಯ ಪ್ರದೀಪ್ ಬಿ.ಸಿ. ಮತ್ತು ಪವಿತ್ರ ದಂಪತಿಗಳ 3 ವರ್ಷದ ಮಗು ಧನ್ವಿತಾ ಇಮ್ಯುನೊ ಡಿಫಿಷಿಯನ್ಸಿ ಎಂದು ಕರೆಯಲ್ಪಡುವ ಖಾಯಿಲೆಯಿಂದ ಬಳಲುತ್ತಿದ್ದಾಳೆ.
ಸಾಂಕ್ರಾಮಿಕ ರೋಗಗಳು ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವ ಪ್ರತಿರಕ್ಷಣಾ ವ್ಯವಸ್ಥೆಯ ಸಾಮರ್ಥ್ಯವು ದುರ್ಬಲಗೊಂಡ ಅಥವಾ ಸಂಪೂರ್ಣವಾಗಿ ಇಲ್ಲದಿರುವ ಸ್ಥಿತಿ ಈ ಖಾಯಿಲೆಯ ಲಕ್ಷಣವಾಗಿದ್ದು, ಈ ಪುಟ್ಟ ಮಗುವಿಗೆ ಮೂಳೆ ಮಜ್ಜೆ ಕಸಿಯ ಅಗತ್ಯವಿದೆ.
ಕಳೆದ ಒಂದು ವರ್ಷದಿಂದ ಮಗುವಿನ ಚಿಕಿತ್ಸೆಗೆ ಪೋಷಕರು ಪರದಾಡುತ್ತಿದ್ದು, ಪ್ರತಿ ತಿಂಗಳು ಸುಮಾರು 40 ಸಾವಿರ ರೂ. ಚಿಕಿತ್ಸೆಗೆ ವೆಚ್ಚವಾಗುತ್ತಿದೆ. ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳುತ್ತಿರುವ ಮಗುವಿನ ಪೋಷಕರು ಈಗಾಗಲೇ ಲಕ್ಷಾಂತರ ರೂ.ಗಳನ್ನು ಚಿಕಿತ್ಸೆಗಾಗಿ ಖರ್ಚು ಮಾಡಿದ್ದು ಮುಂದಿನ ಚಿಕಿತ್ಸೆಗೆ ಹಣ ಇಲ್ಲದೇ ಅಸಹಾಯಕರಾಗಿ ದಾನಿಗಳಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ವೈದ್ಯರು ಮಗುವಿನ ಚಿಕಿತ್ಸೆಗೆ ಲಕ್ಷಾಂತರ ರೂ ವೆಚ್ಚವಾಗುವುದೆಂದು ತಿಳಿಸಿದ್ದು ದಾನಿಗಳು ಮಗುವಿನ ಚಿಕಿತ್ಸೆಗೆ ನೆರವು ನೀಡಬೇಕಿದೆ.
ಎಲ್ಲರಂತೇ ಆಡಿ ನಲಿಯಬೇಕಾದ ವಯಸ್ಸಿನಲ್ಲಿ ಪುಟ್ಟ ಬಾಲಕಿ ಧನ್ವಿತ ಹಾಸಿಗೆ ಹಿಡಿದಿದ್ದಾಳೆ. ಮಗುವಿನ ನಗು ಸಂತೋಷ ಕಂಡು ನಗು ಮೊಗದಲ್ಲಿರಬೇಕಾದ ಪೋಷಕರಲ್ಲಿ ನೋವು ಚಿಂತೆ ಮನೆ ಮಾಡಿದೆ. ಮತ್ತೆ ಈ ಪುಟ್ಟ ಕುಟುಂಬದಲ್ಲಿ ಸಂತೋಷ, ನೆಮ್ಮದಿ ಕಾಣಬೇಕಾದರೇ ನಿಮ್ಮ ನೆರವು ಅಗತ್ಯ. ನಮ್ಮ ನಡುವೆ ಬದುಕುವ ಜೀವಗಳು ಅಸಹಾಯಕತೆಯಿಂದ ನರಳುವಂತಾಗಬಾರದು.
ನೆರವು ನೀಡ ಬಯಸುವವರು ಮಗುವಿನ ತಂದೆ ಪ್ರದೀಪ್ ಬಿ.ಸಿ ಅವರ Phone Pay ಸಂಖ್ಯೆ: 9482138700ಗೆ ನೆರವು ನೀಡಬಹುದು. ಅಥವಾ ಈ ಕೆಳಗಿನ Q R CODE ಗೆ ನೆರವು ನೀಡಬಹುದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: