MLC ರಾಜೇಂದ್ರ ರಾಜಣ್ಣ ಹತ್ಯೆಗೆ ಸುಪಾರಿ: ಪೊಲೀಸರಿಗೆ ಶರಣಾದ ಇಬ್ಬರು ಆರೋಪಿಗಳು

ತುಮಕೂರು: ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹತ್ಯೆಗೆ ಸುಪಾರಿ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸೋಮ ಮತ್ತು ಅಮಿತ್ ಪೊಲೀಸರ ಮುಂದೆ ಶರಣಾಗಿದ್ದಾರೆ.
ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ಬಂದ ಸೋಮವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೋಮನ ವಿರುದ್ಧ ಸಚಿವ ಕೆ.ಎನ್.ರಾಜಣ್ಣ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹತ್ಯೆಗೆ 70 ಲಕ್ಷ ರೂಪಾಯಿ ಡೀಲ್ ಮಾಡಿರುವ ಆರೋಪವಿದೆ. 5 ಲಕ್ಷ ಅಡ್ವಾನ್ಸ್ ಪಡೆದಿರುವ ಆರೋಪದಲ್ಲಿ ಸೋಮನನ್ನ ವಿಚಾರಣೆಗೊಳಪಡಿಸಲಾಗುತ್ತಿದೆ.
ಸುಪಾರಿ ನೀಡಿದವರು ಯಾರು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಭರತ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಸ್ಕೆಚ್ ಹಾಕಿರುವ ಆರೋಪ ಈತನ ಮೇಲಿದೆ. ಸೋಮನ ಆಣತಿಯಂತೆ ಭರತ ಗ್ಯಾಂಗ್ ಲೀಡ್ ಮಾಡುತ್ತಿದ್ದ ಎನ್ನಲಾಗಿದೆ.
ಏನಾಯ್ತು ಹನಿಟ್ರ್ಯಾಪ್?
ಅತ್ತ ವಿಧಾನಸಭೆಯಲ್ಲಿ ಕೆ.ಎನ್.ರಾಜಣ್ಣ ತನ್ನ ಮೇಲೆ ಹನಿಟ್ರ್ಯಾಪ್ ಗೆ ಯತ್ನಿಸಲಾಗಿದೆ ಎಂದು ಆರೋಪಿಸಿದ್ದರು. ಹನಿಟ್ರ್ಯಾಪ್ ತೀವ್ರತೆ ಪಡೆಯುತ್ತಿದ್ದಂತೆಯೇ ದೂರು ದಾಖಲಿಸಲು ರಾಜಣ್ಣ ಹಿಂದೇಟು ಹಾಕಿದ್ದರು. ಹನಿಟ್ರ್ಯಾಪ್ ನಡೆಸಿದವರ ವಿರುದ್ಧ ತನಿಖೆ ಮಾಡಲು ಕೆ.ಎನ್.ರಾಜಣ್ಣ ಗೃಹ ಸಚಿವರಿಗೆ ಮನವಿ ಮಾಡಿದ್ದರು. ಇವೆಲ್ಲದರ ನಡುವೆ ಹನಿಟ್ರ್ಯಾಪ್ ವಿಚಾರ ಸದ್ದಿಲ್ಲದೇ ಮರೆಯಾಗಿದ್ದು, ಕೆ.ಎನ್.ರಾಜಣ್ಣ ಪುತ್ರ, ರಾಜೇಂದ್ರ ರಾಜಣ್ಣ ಕೊಲೆಗೆ ಸುಪಾರಿ ನೀಡಿರುವ ಪ್ರಕರಣ ಮುನ್ನೆಲೆಗೆ ಬಂದಿದೆ. ಹಾಗಿದ್ರೆ ಹನಿಟ್ರ್ಯಾಪ್ ಪ್ರಕರಣ ಏನಾಯ್ತು? ಹನಿಟ್ರ್ಯಾಪ್ ಮಾಡಿದವರು ಯಾರು? ಅವರ ಬಂಧನ ಯಾವಾಗ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ಹನಿಟ್ರ್ಯಾಪ್ ಪ್ರಕರಣ ಒಂದು ರಾಜಕೀಯ ನಾಟಕವೇ? ಜನರನ್ನ ಎಲ್ಲರೂ ಸೇರಿ ಮೂರ್ಖರನ್ನಾಗಿಸುತ್ತಿದ್ದಾರೆಯೇ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: