ಸರ್ಕಾರಿ ಆಸ್ಪತ್ರೆಯಿಂದ 500 ಕೊವಿಶೀಲ್ಡ್ ಲಸಿಕೆ ಕಳವು - Mahanayaka
7:58 AM Thursday 7 - November 2024

ಸರ್ಕಾರಿ ಆಸ್ಪತ್ರೆಯಿಂದ 500 ಕೊವಿಶೀಲ್ಡ್ ಲಸಿಕೆ ಕಳವು

covishield vaccine
22/05/2021

ಹೈದರಾಬಾದ್: ಹೈದರಾಬಾದ್ ಸರ್ಕಾರಿ ಆಸ್ಪತ್ರೆಯಿಂದ  500 ಕೊವಿಶೀಲ್ಡ್ ಲಸಿಕೆ ಬಾಟಲಿಗಳು ಕಾಣೆಯಾಗಿವೆ ಎಂದು ಪೊಲೀಸರು ತಿಳಿಸಿದ್ದು, 500 ಕೊವಿಶೀಲ್ಡ್ ಲಸಿಕೆ ಬಾಟಲಿ ಇದ್ದ 50 ಬಾಕ್ಸ್ ನಾಪತ್ತೆಯಾಗಿದೆ.

ಈ ಬಗ್ಗೆ ಕೊಂಡಾಪುರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ದೂರು ನೀಡಿದ್ದು,  ಮೇ 19ರಂದು ಈ ಘಟನೆ ಬೆಳಕಿಗೆ ಬಂದಿದೆ.  ಸ್ಟಾಕ್ ಪರಿಶೀಲನೆ ನಡೆಸುವಂತೆ ಸಹೋದ್ಯೋಗಿಗಳಿಗೆ ಅಧೀಕ್ಷಕರು ತಿಳಿಸಿದ್ದು, ಈ ಸಂದರ್ಭ 500 ಬಾಟಲ್ ಕೊವಿಶೀಲ್ಡ್ ಲಸಿಕೆ ನಾಪತ್ತೆಯಾಗಿರುವುದು ಕಂಡು ಬಂದಿದೆ ಎಂದು ಅವರ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೂ ಸಿಸಿ ಟಿವಿಯ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಿದಾಗ ವ್ಯಕ್ತಿಯೊಬ್ಬರು ರೆಫ್ರಿಜರೇಟೆಡ್ ರೂಮ್ ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ