6 ತಿಂಗಳ ಹಿಂದೆ ಬಾಲಕನ ಪ್ರಾಣ ಉಳಿಸಿದ್ದ ಸಂಚಾರಿ ವಿಜಯ್ - Mahanayaka

6 ತಿಂಗಳ ಹಿಂದೆ ಬಾಲಕನ ಪ್ರಾಣ ಉಳಿಸಿದ್ದ ಸಂಚಾರಿ ವಿಜಯ್

sanchari vijay
15/06/2021

ಬೆಂಗಳೂರು: 6 ತಿಂಗಳ ಹಿಂದೆ ಬಾಲಕನೋರ್ವನ ಪ್ರಾಣವನ್ನು ಉಳಿಸಲು ಸಂಚಾರಿ ವಿಜಯ್ ನೆರವಾಗಿದ್ದರು ಎಂದು ಬಾಲಕನ  ತಂದೆ ಭರತ್ ಮೋಹನ್ ಹೇಳಿದ್ದು, ಸಂಚಾರಿ ವಿಜಯ್ ಅವರ ಹೆಸರಿನಲ್ಲೇ ನಾವು ಬದುಕಿದ್ದು, ಪ್ರತಿನಿತ್ಯ ಊಟ ಮಾಡಿದ್ದು ಎಂದು ಅವರು ಮರುಗಿದ್ದಾರೆ.


Provided by
Provided by
Provided by
Provided by
Provided by
Provided by
Provided by

ಒಂದು ವರ್ಷದ ಹಿಂದೆ ಮಗುವಿನ ಬ್ರೈನ್ ಆಪರೇಷನ್ ಗೆ ಸಂಚಾರಿ ವಿಜಯ್ ಅವರು ನೆರವಾಗಿದ್ದರು.  ತಮ್ಮ ಸ್ನೇಹಿತರು ಹಾಗೂ ಕೊಡುಗೈ ದಾನಿಗಳಿಂದ ಮಗುವಿನ ಆಪರೇಷನ್ ಗೆ ಸಹಾಯ ಮಾಡಿದ್ದರು ಎಂದು ಅವರು ಹೇಳಿದರು.

ನನ್ನ ಮಗನ ಚಿಕಿತ್ಸೆಗೆ ನೆರವು ನೀಡಿದವರಿಗೆ ಈ ರೀತಿಯ ಪರಿಸ್ಥಿತಿ ಬರಬಾರದಿತ್ತು. ಅವರು ಗುಣಮುಖರಾಗಬೇಕು ಎಂದು ಭರತ್ ಪ್ರಾರ್ಥಿಸಿಕೊಂಡಿದ್ದರು. ಆದರೆ ಸಂಚಾರಿ ವಿಜಯ್ ಕರ್ನಾಟಕದ ಜನರ ನಿರಂತರ ಪ್ರಾರ್ಥನೆಯ ಬಳಿಕವೂ ನಿಧನರಾಗಿದ್ದಾರೆ.

ಇತ್ತೀಚಿನ ಸುದ್ದಿ