ಜನವರಿ 27ರಂದು 75ನೇ ಸಂವಿಧಾನ ದಿನಾಚರಣೆ, ಕ.ದ.ಸಂ.ಸ. ಚಳುವಳಿಗೆ 50 ವರ್ಷದ ಸಂಭ್ರಮ: ವಿಶೇಷ ವಿಚಾರ ಸಂಕಿರಣ ಕಾರ್ಯಕ್ರಮ

ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಸ್ವಾಭಿಮಾನಿ ಕೃಷ್ಣಪ್ಪ ಬಣ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ—ಮಂಗಳೂರು ಇದರ ವತಿಯಿಂದ ಭಾರತದ ಸಂವಿಧಾನ ಜಾರಿಯಾಗಿ 75ನೇ ವರ್ಷಾಚರಣೆ ಹಾಗೂ ದಲಿತ ಸಂಘರ್ಷ ಸಮಿತಿ ಚಳುವಳಿಗೆ 50ರ ಸಂಭ್ರಮಾಚರಣೆ ಕಾರ್ಯಕ್ರಮದ ಅಂಗವಾಗಿ ಜನವರಿ 27ರಂದು ವಿಶೇಷ ವಿಚಾರ ಸಂಕಿರಣವನ್ನು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ.
“ಭಾರತ ಸಂವಿಧಾನದ ಆಶಯಗಳು ಮತ್ತು ಮನುವಾದಿಗಳ ಷಡ್ಯಂತ್ರಗಳು ಹಾಗೂ ದಲಿತ ಸಂಘರ್ಷ ಸಮಿತಿಯ ಹುಟ್ಟು, ಹೋರಾಟ, ನಮ್ಮ ಮುಂದಿರುವ ಸವಾಲುಗಳು” ಎಂಬ ವಿಚಾರದಲ್ಲಿ ವಿಚಾರ ಸಂಕಿರಣ ಆಯೋಗಿಸಲಾಗಿದೆ. ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಲಿದೆ ಎಂದು ಆಯೋಜಕರು ಮಹಾನಾಯಕಕ್ಕೆ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ದ.ಸಂ.ಸ. ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ ವಹಿಸಲಿದ್ದಾರೆ. ಮಾಜಿ ಸಚಿವರಾದ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಕ.ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕರಾದ ಎಂ.ದೇವದಾಸ್ ಅವರು, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪ್ರೊ.ಬಿ.ಕೃಷ್ಣಪ್ಪರವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ.
ಭಾರತದ ಸಂವಿಧಾನದ ಆಶಯಗಳು ಮತ್ತು ಮನುವಾದಿಗಳ ಷಡ್ಯಂತ್ರಗಳು ಎಂಬ ವಿಚಾರದಲ್ಲಿ ಖ್ಯಾತ ಅಂಕಣಕಾರರಾದ ಶಿವಸುಂದರ್ ವಿಚಾರ ಮಂಡನೆ ಮಾಡಲಿದ್ದಾರೆ.
ದಲಿತ ಸಂಘರ್ಷ ಸಮಿತಿಯ ಹುಟ್ಟು—ಹೋರಾಟ ಹಾಗೂ ನಮ್ಮ ಮುಂದಿರುವ ಸವಾಲುಗಳು ಎಂಬ ವಿಚಾರದಲ್ಲಿ ಡಾ.ಅಪ್ಪಗೆರೆ ಸೋಮಶೇಖರ್ ಅವರು ವಿಷಯ ಮಂಡನೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಿವೈಎಫ್ ಐ ಮಾಜಿ ರಾಜ್ಯಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕ.ದ.ಸಂ.ಸ. ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ದಲಿತ ನೌಕರರ ಒಕ್ಕೂಟದ ಉಸ್ತುವಾರಿ ಹೆಚ್.ಡಿ.ಲೋಹಿತ್, ಕ.ದ.ಸಂ.ಸ. ಮಂಗಳೂರು ತಾಲೂಕು ಸಂಚಾಲಕರಾದ ರಾಘವೇಂದ್ರ ಎಸ್., ಕ.ದ.ಸಂ.ಸ. ಹಿರಿಯ ಮುಖಂಡರಾದ ಆನಂದ ಮಿತ್ತಬೈಲ್, ಕ.ದ.ಸಂ.ಸ. ಬೆಳ್ತಂಗಡಿ ಉಸ್ತುವಾರಿ ಅಣ್ಣು ಸಾಧನ ಉಪಸ್ಥಿತರಿರಲಿದ್ದಾರೆ.
ದಲಿತ ಕಲಾ ಮಂಡಳಿ ದ.ಕ. ಜಿಲ್ಲಾ ಸಂಚಾಲಕರಾದ ಕಮಲಾಕ್ಷ ಬಜಾಲ್, ಕ.ದ.ಸಂ.ಸ. ಪುತ್ತೂರು ತಾಲೂಕು ಸಂಚಾಲಕರಾದ ಗಣೇಶ್ ಗುರಿಯಾನ, ಕ.ದ.ಸಂ.ಸ. ಬಂಟ್ವಾಳ ಉಸ್ತುವಾರಿ ಬಾಬು ಸರಪಾಡಿ, ಕ.ದ.ಸಂ.ಸ. ಕಡಬ ತಾಲೂಕು ಸಂಚಾಲಕರಾದ ಉಮೇಶ್ ಕೋಡಿಂಬಾಳ, ಕ.ದ.ಸಂ.ಸ. ಬೆಳ್ತಂಗಡಿ ಇದರ ಪಿ.ಕೆ.ರಾಜು, ಕ.ದ.ಸಂ.ಸ. ಬೆಳ್ತಂಗಡಿ ಹಿರಿಯ ಮುಖಂಡರಾದ ಪಿ.ಕೆ.ಚೀಂಕ್ರ, ಕ.ದ.ಸಂ.ಸ. ಹಿರಿಯ ಮುಖಂಡರಾದ ಮಂಜಪ್ಪ ಪುತ್ರನ್, ಕ.ದ.ಸಂ.ಸ. ಹಿರಿಯ ಮುಖಂಡ ಎನ್.ಪೊಡಿಯ, ದಲಿತ ಕಲಾ ಮಂಡಳಿ ಮಾಜಿ ಸಂಚಾಲಕರಾದ ಸಂಕಪ್ಪ ಕಾಂಚನ್, ಕ.ದ.ಸಂ.ಸ. ಹಿರಿಯ ಮುಖಂಡರಾದ ರುಕ್ಕಯ್ಯ ಅಮೀನ್ ಕರಂಬಾರು ಗೌರವ ಉಪಸ್ಥಿತರಿರಲಿದ್ದಾರೆ.
ದಲಿತ ಕಲಾ ಮಂಡಳಿಯಿಂದ ಹೋರಾಟದ ಹಾಡುಗಳು ಹಾಗೂ ಸಂಘಟನೆಯ ವಿದ್ಯಾರ್ಥಿಗಳಿಂದ ಡಾ.ಬಿ.ಆರ್.ಅಂಬೇಡ್ಕರ್ ಹಾಡಿನ ನೃತ್ಯಗಳು ನಡೆಯಲಿದೆ.
ಜಿಲ್ಲಾ ಸಮಿತಿ ಪದಾಧಿಕಾರಿಗಳು:
ಸಂಚಾಲಕರು: ಸದಾಶಿವ ಪಡುಬಿದ್ರಿ
ಸಂಘಟನಾ ಸಂಚಾಲಕರು: ರಘು ಕೆ ಎಕ್ಕಾರು, ಉಮೇಶ್ ಕೋಡಿಂಬಾಳ, ಬಾಬು ಸರಪಾಡಿ
ಖಜಾಂಚಿ: ನಾಗೇಶ್ ಚಿಲಿಂಬಿ
ಕಾರ್ಯಕಾರಿ ಸಮಿತಿ ಸದಸ್ಯರು: ಕೃಷ್ಣಾನಂದ ಡಿ, ಬಾಲು ಕುಂದರ್, ರಾಮ್ ದಾಸ್ ಮೇರಮಜಲು, ಮಂಜಪ್ಪ ಪುತ್ರನ್, ರಾಜಯ್ಯ ಟಿ.ಡಿ.
ದಲಿತ ನೌಕರರ ಸಮಿತಿ: ಹೆಚ್.ಡಿ.ಲೋಹಿತ್, ಸೋಮಾನಂದ, ಕವತ್ತಾರು
ಜಿಲ್ಲಾ ದಲಿತ ಕಲಾ ಮಂಡಳಿ ಸಂಚಾಲಕರು: ಕಮಲಾಕ್ಷ ಬಜಾಲ್
ಮಂಗಳೂರು ತಾಲೂಕು ದಲಿತ ಕಲಾ ಮಂಡಳಿ ಸಂಚಾಲರು: ಗಂಗಾಧರ್ ಜೋಕಟ್ಟೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: