ನಾಳೆ ಭಾರತ್ ಬಂದ್ | ರೈತರ ದಿಟ್ಟತನದ ಹೋರಾಟಕ್ಕೆ ಕಂಗೆಟ್ಟ ಕೇಂದ್ರ ಸರ್ಕಾರ - Mahanayaka
9:56 PM Wednesday 11 - September 2024

ನಾಳೆ ಭಾರತ್ ಬಂದ್ | ರೈತರ ದಿಟ್ಟತನದ ಹೋರಾಟಕ್ಕೆ ಕಂಗೆಟ್ಟ ಕೇಂದ್ರ ಸರ್ಕಾರ

07/12/2020

ನವದೆಹಲಿ:  ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕರಾಳ ಕಾನೂನು ರದ್ಧತಿಗಾಗಿ ವಿವಿಧ ರೈತ ಸಂಘಟನೆಗಳು ಮಂಗಳವಾರ ಭಾರತ ಬಂದ್ ಗೆ ಕರೆ ನೀಡಿವೆ. ಇದೇ ಸಂದರ್ಭದಲ್ಲಿ ದೇಶಾದ್ಯಂತ ಅನ್ನದಾತನ ಪರವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.  ಈ ನಡುವೆ, ಭಾರತ ಬಂದ್ ನ್ನು ಬೆಂಬಲಿಸುವಂತೆ ರೈತರು ದೇಶದ ಜನರನ್ನು ಮನವಿ ಮಾಡಿದ್ದಾರೆ.


ಇನ್ನೂ ಬಂದ್ ಗೆ ರಾಜಕೀಯ ಪಕ್ಷಗಳು, ಸಾರ್ವಜನಿಕ ಸಂಘಟನೆಗಳು ಬೆಂಬಲ ನೀಡಿರುವುದನ್ನು ರೈತರು ಸ್ವಾಗತಿಸಿದ್ದಾರೆ.  ಕಾಂಗ್ರೆಸ್‌, ಬಹುಜನ ಸಮಾಜ ಪಾರ್ಟಿ(ಬಿಎಸ್ಪಿ),  ಆಮ್‌ ಆದ್ಮಿ ಪಾರ್ಟಿ, ಸಮಾಜವಾದಿ ಪಾರ್ಟಿ, ಎನ್‌ಸಿಪಿ, ಸಿಪಿಐ(ಎಂ) ಮತ್ತು ಡಿಎಂಕೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಭಾರತ ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.


Provided by

ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಹಲವು ಬಾರಿ ರೈತರ ಸಂಘಟನೆಗಳು ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಿದರೂ, ಸರ್ಕಾರವು ಈ ಕರಾಳ ಕಾನೂನಿ ರದ್ಧತಿಗೆ ಮುಂದಾಗಿಲ್ಲ. ಹೀಗಾಗಿ ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿವೆ.  6ನೇ ಸುತ್ತಿನ ಮಾತುಕತೆ ಬುಧವಾರ ನಿಗದಿಯಾಗಿದೆ.

ರೈತರು ರಾಜಧಾನಿಯ ಗಡಿಯಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿಯೇ ರೊಟ್ಟಿಗಳನ್ನು ಮಾಡುತ್ತಾ, ಪರಸ್ಪರ ಹಂಚಿಕೊಂಡು ತಿನ್ನುತ್ತಾ, ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಪ್ರತಿಭಟನೆಗೆ ಬಂದ ಯಾರು ಕೂಡ ಬರೇ ಹೊಟ್ಟೆಯಲ್ಲಿ ನಿಲ್ಲದಂತವ ವ್ಯವಸ್ಥೆಗಳನ್ನು ಮಾಡಲಾಗಿದೆ. ರೈತರ ಈ ದಿಟ್ಟತನದ ಹೋರಾಟಕ್ಕೆ ಕೇಂದ್ರ ಸರ್ಕಾರ ಕಂಗೆಟ್ಟಿದ್ದು, ಇದೀಗ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಬೆಂಬಲವು ರಾಷ್ಟ್ರಾದ್ಯಂತ ಬಂದ್ ಗೆ ಸಹಕಾರಿಯಾಗಿದ್ದು, ದೊಡ್ಡ ಮಟ್ಟದಲ್ಲಿ ರೈತರ ಹೋರಾಟ ರೂಪುಗೊಳ್ಳುತ್ತಿದೆ.

ಇತ್ತೀಚಿನ ಸುದ್ದಿ