ಬೆಂಗಳೂರಿನಲ್ಲಿ ನಡೆದ ಅತ್ಯಾಚಾರದ ವಿಡಿಯೋ ಬಾಂಗ್ಲಾ ದೇಶದಲ್ಲಿ ವೈರಲ್ | ಕೊನೆಗೂ ಆರೋಪಿಗಳ ಬಂಧನ - Mahanayaka
4:06 AM Thursday 16 - October 2025

ಬೆಂಗಳೂರಿನಲ್ಲಿ ನಡೆದ ಅತ್ಯಾಚಾರದ ವಿಡಿಯೋ ಬಾಂಗ್ಲಾ ದೇಶದಲ್ಲಿ ವೈರಲ್ | ಕೊನೆಗೂ ಆರೋಪಿಗಳ ಬಂಧನ

video viral
27/05/2021

ಬೆಂಗಳೂರು: ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಪೈಶಾಚಿಕ ಕೃತ್ಯ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಂಗ್ಲಾ ಮೂಲದ ಆರೋಪಿಗಳು ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.


Provided by

ಆರೋಪಿಗಳಾದ ಬಾಂಗ್ಲಾ ಮೂಲದ ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಹಾಗೂ ಹೈದರಾಬಾದ್ ಮೂಲದ ಹಕೀಲ್ ಎಂಬಾತನನ್ನು ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.

ರಾಮಮೂರ್ತಿ ನಗರದ ಎನ್ ಐ ಆರ್ ಲೇಔಟ್ ನಲ್ಲಿ ಕಳೆದ 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು. ಆರೋಪಿಗಳು ಅತ್ಯಾಚಾರವನ್ನು ವಿಡಿಯೋ ಮಾಡಿಕೊಂಡಿದ್ದರು.  ಆದರೆ ಈ ವಿಡಿಯೋ ವೈರಲ್ ಆಗಿದ್ದು, ಇದರಿಂದಾಗಿ ಘಟನೆ ಬೆಳಕಿಗೆ ಬಂದಿದೆ.

ಈ ವಿಡಿಯೋ ಕೆಲವು ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ ವೈರಲ್ ಆಗಿದ್ದು, ಅಲ್ಲಿ ಭಾರೀ ಚರ್ಚೆಗೊಳಗಾದ ನಂತರ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಬಳಿಕ ಎಲ್ಲ ವಿಡಿಯೋ ಮೂಲವನ್ನು ಜಾಲಾಡಿದಾಗ ವಿಡಿಯೋ ಅಲ್ ಲೋಡ್ ಆಗಿರುವುದು ಇಂಡಿಯಾದಿಂದ ಎಂಬ ಮಾಹಿತಿ ಗೊತ್ತಾಗಿದೆ. ಬಳಿಕ ಅವರಿಂದ ಅಸ್ಸಾಂ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದ್ದು, ಅಸ್ಸಾಂ ಪೊಲೀಸರು ಟವರ್ ಡಂಪ್ ಪತ್ತೆ ಮಾಡಿದ ಬೆಂಗಳೂರು ಎಂಬುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಆರೋಪಿಗಳು ಯುವತಿಯನ್ನು ಅತ್ಯಾಚಾರ ನಡೆಸಿದ ಬಳಿಕ ಆಕೆಯ ಖಾಸಗಿ ಅಂಗಕ್ಕೆ ಮದ್ಯದ ಬಾಟಲಿಯನ್ನು ತುರುಕಿಸಿ ವಿಕೃತಿ ಮೆರೆದಿದ್ದು, ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಈ ಆರೋಪಿಗಳು  ಆವಲಹಳ್ಳು ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು ಎಂದು ಹೇಳಲಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಇನ್ನೂ ಇಬ್ಬರು ಈ ಪ್ರಕರಣದಲ್ಲಿ ಶಾಮೀಲಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇತ್ತೀಚಿನ ಸುದ್ದಿ