ದಲಿತರ ಸಂಭ್ರಮ ಸಹಿಸಲು ಸಾಧ್ಯವಾಗದೇ, ಪೂರ್ವ ನಿಯೋಜಿತ ದಾಳಿ | ಬಯಲಾಯ್ತು ವಿಕೃತ ಜಾತಿಯವರ ಕೃತ್ಯ - Mahanayaka
11:33 AM Sunday 14 - September 2025

ದಲಿತರ ಸಂಭ್ರಮ ಸಹಿಸಲು ಸಾಧ್ಯವಾಗದೇ, ಪೂರ್ವ ನಿಯೋಜಿತ ದಾಳಿ | ಬಯಲಾಯ್ತು ವಿಕೃತ ಜಾತಿಯವರ ಕೃತ್ಯ

13/11/2020

ತೆಲಂಗಾಣ: ದಲಿತರು ಸಂಭ್ರಮಿಸಿದರೆ, ಮೇಲು ಜಾತಿ ಎಂದು ಎನಿಸಿಕೊಂಡವರಿಗೆ ನವರಂಧ್ರಗಳಲ್ಲೂ ಉರಿ ಆರಂಭವಾಗಿರುತ್ತದೆ. ಅನಗತ್ಯವಾಗಿ ಅವರ ಮೇಲೆ ಬಿದ್ದು ಹಿಂಸೆಗೆ ತೊಡಗುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ತೆಲಂಗಾಣದ ಸಿರಿಸಿಲ್ಲಾದ ರಾಮೋಜಿಪೇಟದಲ್ಲಿ ದಸರ ಸಂದರ್ಭದಲ್ಲಿ ನಡೆದ ಹಿಂಸಾಚಾರವು ಪೂರ್ವ ನಿಯೋಜಿತ ದಾಳಿ ಎನ್ನುವುದು ಬಯಲಾಗಿದೆ.


Provided by

 ವಾಯ್ಸ್ ಆಫ್ ದಲಿತ ಕಲೆಕ್ಟಿವ್‌ನ ಸ್ವತಂತ್ರ ಸತ್ಯ-ಶೋಧನಾ ಸಮಿತಿಯು ವರದಿಯಲ್ಲಿ ಈ ಅಂಶ ತಿಳಿದು ಬಂದಿದ್ದು, ಮಾದಿಗ ಕುಟುಂಬಗಳ ಮೇಲೆ ಪೂರ್ವನಿಯೋಜಿತವಾಗಿ ದಾಳಿ ನಡೆಸಿ, ಮೇಲು ಜಾತಿ ಎಂದು ಕರೆಸಿಕೊಳ್ಳುವ ವಿಕೃತರು ಹಿಂಸಾಚಾರ ನಡೆಸಿರುವುದು ಸ್ಪಷ್ಟವಾಗಿದೆ.

ದಸರ ಕಾರ್ಯಕ್ರಮದಲ್ಲಿ ರಾತ್ರಿ ದಲಿತ ಕಾಲನಿಯಲ್ಲಿ ಸಂಗೀತ ನುಡಿಸಲಾಗುತ್ತಿತ್ತು. ದಲಿತರ ಕೇರಿಯ ಸಂಭ್ರಮ ನೋಡಲಾಗದೇ ಉರಿದು ಹೋದ ವಿಕೃತ ಜಾತಿಯ ಸುಮಾರು 200 ಕ್ಕೂ ಅಧಿಕ ಪುರುಷ ಹಾಗೂ ಮಹಿಳೆಯರು ದಲಿತರ ಮೇಲೆ ದಾಳಿ ನಡೆಸಿ ಹಿಂಸಾಚಾರ ನಡೆಸಿದ್ದರು. ಇದು ಪೂರ್ವ ನಿಯೋಜಿತ ಕೃತ್ಯ ಎನ್ನುವುದು ಇದೀಗ ತಿಳಿದು ಬಂದಿದೆ.

ಪ್ರೊಫೆಸರ್ ಕೆ ಲಕ್ಷ್ಮೀನಾರಾಯಣ, ಸಹಾಯಕ ಪ್ರಾಧ್ಯಾಪಕ ಡಾ.ಬಾಲಬೊಯಿನಾ ಸುದರ್ಶನ್ ಮತ್ತು ಡಾ.ಪಸುನೂರಿ ರವೀಂದರ್ ನೇತೃತ್ವದ ಸತ್ಯಶೋಧನಾ ಸಮಿತಿಯು ಈ ವರದಿಯನ್ನು ನೀಡಿದೆ.

ಇತ್ತೀಚಿನ ಸುದ್ದಿ