ಭಾರತದಿಂದ ರಫ್ತಾದ ಮೀನಿನ ಪ್ಯಾಕ್ ಗಳಲ್ಲಿ ಜೀವಂತ ಕೊರೊನಾ ವೈರಸ್ ಪತ್ತೆ | ಮೀನು ಆಮದು ನಿಷೇಧಿಸಿದ ಚೀನಾ! - Mahanayaka

ಭಾರತದಿಂದ ರಫ್ತಾದ ಮೀನಿನ ಪ್ಯಾಕ್ ಗಳಲ್ಲಿ ಜೀವಂತ ಕೊರೊನಾ ವೈರಸ್ ಪತ್ತೆ | ಮೀನು ಆಮದು ನಿಷೇಧಿಸಿದ ಚೀನಾ!

13/11/2020

ಬೀಜಿಂಗ್:  ಭಾರತದಿಂದ ಆಮದು ಮಾಡಿಕೊಂಡ ಹೆಪ್ಪುಗಟ್ಟಿದ ಮೀನುಗಳ ಪ್ಯಾಕ್ ಗಳಲ್ಲಿ ಕೊರೊನಾ ವೈರಸ್ ಇದೆ ಎಂದು ಭಾರತದ ಆಹಾರ ವಿತರಣಾ ಕಂಪೆನಿ ಬಸು ಇಂಟರ್ ನ್ಯಾಷನಲ್ ನಿಂದ ಮೀನು ಆಮದನ್ನು ನಿಷೇಧಿಸಲಾಗಿದೆ ಎಂದು ಚೀನೀ ಕಸ್ಟಮ್ಸ್ ಕಚೇರಿ ವರದಿ ಮಾಡಿದೆ.

ಮೀನುಗಳನ್ನು ಪ್ಯಾಕ್ ಗಳಲ್ಲಿ ಮೂರು ಕೊರೊನಾ ಮಾದರಿಗಳು ಪತ್ತೆಯಾಗಿವೆ. ಹೀಗಾಗಿ ಒಂದು ವಾರಗಳ ಕಾಲ ಬಸು ಇಂಟರ್ ನ್ಯಾಷನಲ್ ಗೆ ನಿಷೇಧ ಹೇರುವುದಾಗಿ ಚೀನಾ ಕಸ್ಟಮ್ಸ್ ಜನರಲ್ ಅಡ್ಮಿನಿಸ್ಟ್ರೇಷನ್  ಹೇಳಿಕೆಯಲ್ಲಿ ತಿಳಿಸಿದೆ.

ಆಮದು ಮಾಡಿಕೊಂಡ ಮೀನುಗಳ ಪ್ಯಾಕೆಟ್ ಗಳ ಮೇಲೆ ಜೀವಂತ ಕೊರೊನಾ ವೈರಸ್ ಹಾಗೂ ಸತ್ತ ಕೊರೊನಾ ವೈರಸ್ ಮಾದರಿಗಳು ಪತ್ತೆಯಾಗಿವೆ ಕಿಂಗ್ ಡಾವೋದಲ್ಲಿ ಖರೀದಿಸಿದ ಪ್ಯಾಕೇಟ್ ಗಳಲ್ಲಿ ಕೊರೊನಾ ವೈರಸ್ ನ ಮಾದರಿಗಳು ಪತ್ತೆಯಾಗಿವೆ. ಈ ರೀತಿಯ ಪ್ಯಾಕೆಟ್ ಗಳು ಕೊರೊನಾ ವೈರಸ್ ಹರಡಲು ಕಾರಣವಾಗಬಹುದು ಎಂದು ಚೀನಾ ಹೇಳಿದೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ