ಅಮಿತ್ ಶಾ ಅವರ ಪ್ರೊಫೈಲ್ ಚಿತ್ರವನ್ನು ಡಿಲೀಟ್ ಮಾಡಿದ ಟ್ವಿಟ್ಟರ್!
13/11/2020
ನವದೆಹಲಿ: ಗೃಹ ಸಚಿವ ಅಮಿತ್ ಶಾ ಅವರ ಟ್ವಿಟ್ಟರ್ ಖಾತೆಯಿಂದ ಅವರ ಪ್ರೊಫೈಲ್ ಚಿತ್ರವನ್ನು ಟ್ವಿಟ್ಟರ್ ಡಿಲೀಟ್ ಮಾಡಿದ್ದು, ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಟ್ವಿಟ್ಟರ್ ಕಾರಣವಾಯಿತು.
ಟ್ವಿಟ್ಟರ್ ನಿಯಮಗಳ ಪ್ರಕಾರವಾಗಿ ಟ್ವಿಟ್ಟರ್ ಈ ಕ್ರಮವನ್ನು ಕೈಗೊಂಡಿತ್ತು. ಅಮಿತ್ ಶಾ ಅವರು ಹಾಕಿಕೊಂಡಿರುವ ಚಿತ್ರ ಕಾಪಿರೈಟ್ ಮೂಲವಾಗಿ ಅದನ್ನು ಡಿಲೀಟ್ ಮಾಡಲಾಗಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಟ್ವಿಟ್ಟರ್ ಮತ್ತೆ ಚಿತ್ರವನ್ನು ಅಪ್ ಲೋಡ್ ಮಾಡಿದೆ.
ಅಮಿತ್ ಶಾ ಅವರು ಬಳಸಿರುವ ಚಿತ್ರ ಅವರ ಸ್ವಂತದ್ದು ಅಲ್ಲ ಎನ್ನುವ ಕಾರಣಕ್ಕಾಗಿ ತೆಗೆದು ಹಾಕಲಾಗಿತ್ತು. ಕೃತಿಸ್ವಾಮ್ಯದ ಆಧಾರದಲ್ಲಿ ಟ್ವಿಟ್ಟರ್ ನಿಂದ ಅಮಿತ್ ಶಾ ಅವರ ಫೋಟೋವನ್ನು ಟ್ವಿಟ್ಟರ್ ತೆಗೆದಿತ್ತು. ಆ ಬಳಿಕ ತಪ್ಪನ್ನು ಸರಿಪಡಿಸಿಕೊಳ್ಳಲಾಗಿದೆ ಎಂದು ಟ್ವಿಟ್ಟರ್ ವಕ್ತಾರರು ತಿಳಿಸಿದ್ದಾರೆ.