ಬರಾಕ್ ಒಬಾಮಾ ಆತ್ಮಚರಿತ್ರೆಯಲ್ಲಿ ರಾಹುಲ್ ಗಾಂಧಿ-ಡಾ.ಸಿಂಗ್ ಉಲ್ಲೇಖ | ಪ್ರಧಾನಿ ಮೋದಿ ಕುರಿತು ಒಂದಕ್ಷರವೂ ಬರೆಯದ ಒಬಾಮಾ! - Mahanayaka

ಬರಾಕ್ ಒಬಾಮಾ ಆತ್ಮಚರಿತ್ರೆಯಲ್ಲಿ ರಾಹುಲ್ ಗಾಂಧಿ-ಡಾ.ಸಿಂಗ್ ಉಲ್ಲೇಖ | ಪ್ರಧಾನಿ ಮೋದಿ ಕುರಿತು ಒಂದಕ್ಷರವೂ ಬರೆಯದ ಒಬಾಮಾ!

13/11/2020

ವಾಷಿಂಗ್ಟನ್:  ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಉತ್ತರಾಧಿಕಾರಿ ರಾಹುಲ್ ಗಾಂಧಿ ಅವರ ಬಗ್ಗೆ ಬರೆದಿದ್ದು, ಪ್ರಧಾನಿ ನರೇಂದ್ರ ಮೋದಿ ಕುರಿತು ಯಾವುದೇ ವಿಚಾರಗಳನ್ನು ಪ್ರಸ್ತಾಪಿಸಿಲ್ಲ.

ಬರಾಕ್ ಒಬಾಮ ಅವರು “ಎ ಪ್ರಾಮಿಸ್ಡ್ ಲ್ಯಾಂಡ್” ಎಂಬ ತಮ್ಮ ಆತ್ಮಚರಿತ್ರೆಯನ್ನು ಬರೆಯುತ್ತಿದ್ದಾರೆ.  ಇದರಲ್ಲಿ ಭಾರತ ಇಬ್ಬರು ನಾಯಕರ ಬಗ್ಗೆ ಮಾತ್ರವೇ ಅವರು ಬರೆದಿದ್ದಾರೆ. ರಾಹುಲ್ ಗಾಂಧಿ ಅವರ ಕುರಿತು ಬರೆಯುತ್ತಾ, ರಾಹುಲ್ ಗಾಂಧಿಯವರಲ್ಲಿ ಒಂದು ಅಜ್ಞಾತ ಗುಣವಿದೆ. ಅವರು ಕಲಿಕೆಯಲ್ಲಿ ಉತ್ಸಾಹವನ್ನು ಹೊಂದಿದ್ದಾರೆ. ಆದರೆ, ವಿಷಯವನ್ನು ಕರಗತ ಮಾಡಿಕೊಳ್ಳುವ ಉತ್ಸಾಹ ಅಥವಾ ಸಾಮರ್ಥ್ಯ ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.

ಇನ್ನೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ಬರೆಯುತ್ತಾ, ಮನಮೋಹನ್ ಸಿಂಗ್ ಅವರು ಒಂದು ರೀತಿಯ ನಿರ್ಭಯ ಸಮಗ್ರತೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಒಬಾಮಾ ಅವರು ಸ್ನೇಹಿತರು ಎಂದು ಬಿಜೆಪಿ ಕಾರ್ಯಕರ್ತರು ವಾದಿಸುತ್ತಲೇ ಬರುತ್ತಿದ್ದರೂ, ಒಬಾಮಾ ಅವರು ಪ್ರಧಾನಿ ಮೋದಿ ಕುರಿತು ಒಂದು ಅಕ್ಷರವೂ ಬರೆದ ಬಗ್ಗೆ ಉಲ್ಲೇಖ ದೊರೆತಿಲ್ಲ. ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಒಬಾಮಾ ಅವರಿಗೆ ಮಾಧ್ಯಮಗಳು ಪ್ರಶ್ನೆಗ ಕೇಳಿದಾಗ ಅವರು ಮನಮೋಹನ್ ಸಿಂಗ್ ಅವರನ್ನು ಗುಣಗಾನ ಮಾಡಿದ್ದರು.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ