ಒಂದು ದೇಶ, ಒಂದು ಚುನಾವಣೆ | ಚುನಾವಣಾ ವ್ಯವಸ್ಥೆ ಬದಲಾಗಬೇಕು ಎಂದ ಪ್ರಧಾನಿ ಮೋದಿ - Mahanayaka
10:53 AM Saturday 23 - August 2025

ಒಂದು ದೇಶ, ಒಂದು ಚುನಾವಣೆ | ಚುನಾವಣಾ ವ್ಯವಸ್ಥೆ ಬದಲಾಗಬೇಕು ಎಂದ ಪ್ರಧಾನಿ ಮೋದಿ

26/11/2020


Provided by

ನವದೆಹಲಿ: ಒಂದು ದೇಶ ಒಂದು ಚುನಾವಣೆ ಎಂಬುವುದು ಕೇವಲ ಚರ್ಚೆ ಮಾತ್ರವಲ್ಲ, ಅದರ ಅಗತ್ಯ ದೇಶಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂವಿಧಾನದ ದಿನದ ಅಂಗವಾಗಿ ನಡೆದ ಅಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಕೆಲವು ತಿಂಗಳಿಗೆ, ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಇದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಮಸ್ಯೆ ಬಗ್ಗೆ ಅಧ್ಯಯನ ನಡೆಯಬೇಕಿದೆ ಎಂದು ಹೇಳಿದರು.


ಲೋಕಸಭೆ, ವಿಧಾನಸಭೆ ಮತ್ತು ಪಂಚಾಯತ್ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿ ಇರಬೇಕು ಎಂದು ಪ್ರಧಾನಿ ಪ್ರತಿಪಾದಿಸಿದರು. ಪ್ರತ್ಯೇಕ ಪಟ್ಟಿಗಳು ಸಂಪನ್ಮೂಲಗಳ ವ್ಯರ್ಥ ಎನ್ನುವ ಮೂಲಕ ಸದ್ಯ ಇರುವ ಚುನಾವಣಾ ವ್ಯವಸ್ಥೆ ಬದಲಾಯಿಸುವ ಬಗ್ಗೆ ಸುಲಿವು ನೀಡಿದ್ದಾರೆ.

ಇತ್ತೀಚಿನ ಸುದ್ದಿ