ಹೊಟೇಲ್ ಗೆ ನುಗ್ಗಿದ ಲಾರಿ; ನಾಲ್ವರು ಸ್ಥಳದಲ್ಲಿಯೇ ಸಾವು - Mahanayaka
6:14 AM Thursday 7 - December 2023

ಹೊಟೇಲ್ ಗೆ ನುಗ್ಗಿದ ಲಾರಿ; ನಾಲ್ವರು ಸ್ಥಳದಲ್ಲಿಯೇ ಸಾವು

26/11/2020

ಚಿಕ್ಕಬಳ್ಳಾಪುರ: ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕಾರುಗಳಿಗೆ ಡಿಕ್ಕಿ ಹೊಡೆದು ಬಳಿಕ ಹೊಟೇಲ್ ಗೆ ನುಗ್ಗಿದ ಘಟನೆ ನಗರದ ಹೊರವಲಯದ ಚದಲಪುರ ಕ್ರಾಸ್ ನಲ್ಲಿ ನಡೆದಿದ್ದು, ಪರಿಣಾಮವಾಗಿ ಕಾರಿನಲ್ಲಿದ್ದ ಓರ್ವರು ಹಾಗೂ ಹೊಟೇಲ್ ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಗವಿಗಾನಹಳ್ಳಿಯ ಗಾರೆ ಯಮುನಾಚಾರಿ, ವೆಂಕಟೇಶಪ್ಪ , ನಿತೀಶ್‍ಗೌಡ, ತಮಿಳುನಾಡಿನ ಕಲಂಜಲ್ , ಕಾರಿನಲ್ಲಿದ್ದ ಯಮುನಾ ಚಾರಿ,ಮೃತಪಟ್ಟವರಾಗಿದ್ದಾರೆ.

ಟೀ ಕುಡಿಯಲು ನಿಂತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಕಾರಿನಲ್ಲಿದ್ದ ಯಮುನಾಚಾರಿಯೂ ಸಹ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ, ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ  ಸ್ಥಳಕ್ಕೆ ಡಿವೈಎಸ್‍ಪಿ ರವಿಶಂಕರ್, ಎಸ್‍ಪಿ ಮಿಥುನ್‍ಕುಮಾರ್, ಸಿಪಿಐ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಂದಿಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ