ಮುಸ್ಲಿಮ್ ಯುವಕನನ್ನು ನಂಬಿ ಕೆಟ್ಟ ಹಿಂದೂ ಮಹಿಳೆ | ಕೋಟಿ ಗಟ್ಟಲೆ ಆಸ್ತಿಯ ಮಹಿಳೆ ಈಗ ಲಾಡ್ಜ್ ನಲ್ಲಿ ವಾಸ! - Mahanayaka

ಮುಸ್ಲಿಮ್ ಯುವಕನನ್ನು ನಂಬಿ ಕೆಟ್ಟ ಹಿಂದೂ ಮಹಿಳೆ | ಕೋಟಿ ಗಟ್ಟಲೆ ಆಸ್ತಿಯ ಮಹಿಳೆ ಈಗ ಲಾಡ್ಜ್ ನಲ್ಲಿ ವಾಸ!

26/11/2020

ಮಂಗಳೂರು: ಮುಸ್ಲಿಮ್ ಯುವಕನನ್ನು ನಂಬಿ ಹಿಂದೂ ಮಹಿಳೆಯೊಬ್ಬರು ನಡು ದಾರಿಯಲ್ಲಿ ನಿಲ್ಲುವ ಸ್ಥಿತಿ ಬಂದೊದಗಿದೆ. ಫೇಸ್ ಬುಕ್ ನಲ್ಲಿ ಪರಿಚಯವಾದ ಇಬ್ರಾಹಿಂ ಖಲೀಲ್ ಎಂಬಾತನನ್ನು ಕೇರಳ ಕಣ್ಣೂರಿನ  ಹಿಂದೂ ಧರ್ಮದ ಪ್ರತಿಷ್ಠಿತ ಕುಟುಂಬದ ವಿವಾಹಿತ ಮಹಿಳೆ ಶಾಂತಿ ಜೂಬಿ ಎಂಬಾಕೆ ಮದುವೆಯಾಗಿದ್ದು, ಮದುವೆಯ ಬಳಿಕ ಆಸ್ತಿ ಎಲ್ಲವನ್ನೂ ತನ್ನ ಹೆಸರಿಗೆ ಮಾಡಿಕೊಂಡಿರುವ ಇಬ್ರಾಹಿಂ, ಶಾಂತಿ ಜೂಬಿ ಅವರನ್ನು ವಂಚಿಸಿ ಪರಾರಿಯಾಗಿದ್ದಾನೆ.

2017ರಲ್ಲಿ ಇಬ್ರಾಹಿಂ ಖಲೀಲ್ ನ ಬಣ್ಣದ ಮಾತಿಗೆ ಮರುಳಾಗಿ ಆತನನ್ನು ಶಾಂತಿ ಜೂಬಿ ವಿವಾಹವಾಗಿದ್ದರು. ಮದುವೆಯ ಬಳಿಕ ಇಬ್ರಾಹಿಂ ಖಲೀಲ್ ನ ಕುಟುಂಬಸ್ಥರ ಒತ್ತಡದಿಂದಾಗಿ ಆಕೆ ಇಸ್ಲಾಮ್ ಗೆ ಮತಾಂತರಗೊಂಡಿದ್ದಳು. ಆ ಬಳಿಕ ಸಂಸಾರ ಸುಖವಾಗಿಯೇ ನಡೆಯುತ್ತಿತ್ತು. ಆದರೆ ಕಳೆದ 7-8 ತಿಂಗಳಿನಿಂದ ವಂಚಕ ಇಬ್ರಾಹಿಂ ಖಲೀಲ್ ಮಹಿಳೆಯನ್ನು ಬಿಟ್ಟು ಎಸ್ಕೇಪ್ ಆಗಿದ್ದಾನೆ.


ಖಲೀಲ್ ಮನೆಯಲ್ಲಿ ಈ ಬಗ್ಗೆ ಹೇಳಿದಾಗ, ನೀನು ಅವನನ್ನು ಬಿಟ್ಟು ಬಿಡು ಎಂದು ಬೆದರಿಕೆ ಹಾಕುತ್ತಿದ್ದಾರಂತೆ. ಬೆಂಗಳೂರಿನ ವಿಜಯನಗರದಲ್ಲಿ ನಾಲ್ಕೈದು ಕೋಟಿ ಬೆಲೆಬಾಳುವ ಮನೆ, ತವರಿನ ಎಲ್ಲ ಆಸ್ತಿಯನ್ನು ಶಾಂತಿ ಇಬ್ರಾಹಿಂ ಖಲೀಲ್ ಗೆ ನೀಡಿದ್ದು, ಇದೀಗ ಬರಿಗೈಯಲ್ಲಿ ನಿಂತಿದ್ದಾಳೆ. ಖಲೀಲ್ ನ ಮನೆಯವರು ಆಕೆಯನ್ನು ಮನೆಯಿಂದ ಹೊರ ಹಾಕಿದ್ದು, ಈಗ ಆಕೆ ಲಾಡ್ಜ್ ನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಈ ಬಗ್ಗೆ ನ್ಯಾಯ ದೊರಕಿಸಿಕೊಡುವಂತೆ ಮುಸ್ಲಿಮ್ ಸಂಘಟನೆಗಳ ಮೊರೆ ಹೋದರೂ ಆಕೆಗೆ ನ್ಯಾಯ ಸಿಕ್ಕಿಲ್ಲ ಎಂದು ಶಾಂತಿ ಹೇಳಿದ್ದಾಳೆ. ನಿಯತ್ತಿಲ್ಲದ ಮುಸ್ಲಿಮ್ ಯುವಕನನ್ನು ನಂಬಿ ಅಂತೂ ಓರ್ವಳು ಮಹಿಳೆ ಬೀದಿಯಲ್ಲಿ ನಿಂತಿದ್ದಾಳೆ. ಬಣ್ಣದ ಮಾತಿಗೆ ಕಿವಿಕೊಡುವ ಮುನ್ನ ಇಂತಹ ಪ್ರಕರಣಗಳನ್ನು ಓದಿದರೆ ಸಾಕು. ಯಾರೂ ಇಂತಹ ತಪ್ಪನ್ನು ಮಾಡಲಾರರು.

ಇತ್ತೀಚಿನ ಸುದ್ದಿ