ನಿವಾರ್ ಚಂಡಮಾರುತಕ್ಕೆ ಐವರು ಬಲಿ, ನೂರಕ್ಕೂ ಅಧಿಕ ಜನರಿಗೆ ಗಾಯ - Mahanayaka

ನಿವಾರ್ ಚಂಡಮಾರುತಕ್ಕೆ ಐವರು ಬಲಿ, ನೂರಕ್ಕೂ ಅಧಿಕ ಜನರಿಗೆ ಗಾಯ

26/11/2020

ಚೆನ್ನೈ: ತಮಿಳುನಾಡು ಮತ್ತು ಪುದುಚೇರಿಗೆ ನಿವಾರ್ ಚಂಡಮಾರುತ ಅಪ್ಪಳಿಸಿದ್ದು, ಐದು ಮಂದಿ ಸಾವನ್ನಪ್ಪಿ, ನೂರಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ  ನಡೆದಿದ್ದು, ಚೆನ್ನೈ, ಚೆಂಗಲ್ಪಟ್ಟು, ತಿರುವಳ್ಳೂರು, ಕಡಲೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.


Provided by

ಚೆನ್ನೈನಲ್ಲಿ 23 ಸೆಂ.ಮೀ.ನಷ್ಟು ಮಳೆಯಾಗಿರುವುದು ದಾಖಲಾಗಿದೆ. ಈ ನಡುವೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಎರಡು ದಿನ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ನಿವಾರ್ ಚಂಡಮಾರುತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ  . 13 ಲಕ್ಷ ಜನರಿಗೆ ಸುರಕ್ಷತೆ ಕಲ್ಪಿಸಬಲ್ಲ 4,733 ಪರಿಹಾರ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯವರೆಗೆ 28 ಸಾವಿರ ಮಕ್ಕಳು ಸೇರಿ 1.38 ಲಕ್ಷ ಜನರನ್ನು ಈ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಮುನ್ನೆಚ್ಚರಿಕೆಯಾಗಿ ಚೆನ್ನೈ ಬಳಿ ಇರುವ ಚೇರಂಬರಂಬಾಕ್ಕಂ ಜಲಾಶಯದ ಗೇಟ್‍ ಗಳನ್ನು ತೆರೆದು ಅಡ್ಯಾರ್ ನದಿಗೆ ನೀರು ಹರಿಸಲಾಗಿದೆ. ಇದರಿಂದಾಗಿ ಆಡ್ಯಾರ್ ನದಿಯಲ್ಲಿ ಪ್ರವಾಹ ಸಾಧ್ಯತೆಯಿದ್ದು, ನದಿ ತೀರದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಈ ಜಲಾಶಯದ ಗೇಟ್ ತೆರೆದು ನೀರು ಹರಿಸಿರುವುದು ಇದೇ ಮೊದಲ ಬಾರಿಯಾಗಿದೆ.

ಇತ್ತೀಚಿನ ಸುದ್ದಿ