ಎಣ್ಣೆ ಹೊಡೆಯಲು ಬಂದಿದ್ದಾಳೆ ಅಂದುಕೊಂಡರೆ, ಆಕೆ ಸಾವಿರಾರು ಪೌಂಡ್ ಬೆಲೆಯ ಮದ್ಯದ ಬಾಟಲಿ ಹೊಡೆದು ಹಾಕಿದಳು! - Mahanayaka

ಎಣ್ಣೆ ಹೊಡೆಯಲು ಬಂದಿದ್ದಾಳೆ ಅಂದುಕೊಂಡರೆ, ಆಕೆ ಸಾವಿರಾರು ಪೌಂಡ್ ಬೆಲೆಯ ಮದ್ಯದ ಬಾಟಲಿ ಹೊಡೆದು ಹಾಕಿದಳು!

28/11/2020


Provided by

ನ್ಯೂಸ್ ಡೆಸ್ಕ್:  ಸೂಪರ್ ಮಾರ್ಕೆಟ್ ಗೆ ನುಗ್ಗಿದ ಮಹಿಳೆಯೊಬ್ಬರು, ಸಾವಿರಾರು ಪೌಂಡ್ ಬೆಲೆ ಬಾಳುವ ಮದ್ಯದ ಬಾಟಲಿಗಳನ್ನುಒಡೆದು ಹಾಕಿದ ಘಟನೆ ನಡೆದಿದೆ. ಇಂಗ್ಲೆಂಡ್‌ ನ ಹರ್ಟ್‌ಫೋರ್ಡ್‌ಶೈರ್ ಕೌಂಟಿಯ ಇಂಗ್ಲೆಂಡ್‌ನ ಸ್ಟೀವನೇಜ್ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಸೂಪರ್ ಮಾರ್ಕೆಟ್ ಗೆ ನುಗ್ಗಿದ ಮಹಿಳೆ ಮದ್ಯ ಮಾರಾಟಕ್ಕೆ ಇಡಲಾಗಿದ್ದ ಪ್ರದೇಶಕ್ಕೆ ಬಂದಿದ್ದಾಳೆ.  ಬಳಿಕ ಮದ್ಯದ ಬಾಟಲಿಗಳನ್ನು ನೆಲಕ್ಕೆ ಹೊಡೆದಿದ್ದಾಳೆ.  ಬಹಳಷ್ಟು ಕೋಪದಲ್ಲಿದ್ದ ಮಹಿಳೆಯನ್ನು ಸಮೀಪಿಸಲು ಕೂಡ ಸೂಪರ್ ಮಾರ್ಕೆಟ್ ಸಿಬ್ಬಂದಿ ಭಯಪಟ್ಟಿದ್ದರು. ಬಳಿಕ ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮಹಿಳೆಯನ್ನು ಬಂಧಿಸಿದ್ದು, ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಅವರು ನಿರಾಕರಿಸಿದ್ದಾರೆ. ಬಾಟಲಿಗಳನ್ನು ಒಡೆದ ಹಿನ್ನೆಲೆಯಲ್ಲಿ ಮಹಿಳೆಯ ಕೈಗೆ ಗಾಯವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.


ಇತ್ತೀಚಿನ ಸುದ್ದಿ