ಮುಸ್ಲಿಮರಿಗೆ ಟಿಕೆಟ್ ಕೊಡುವುದಿಲ್ಲ | ಸಚಿವ ಕೆ.ಎಸ್​ ಈಶ್ವರಪ್ಪ ಹೇಳಿಕೆ - Mahanayaka

ಮುಸ್ಲಿಮರಿಗೆ ಟಿಕೆಟ್ ಕೊಡುವುದಿಲ್ಲ | ಸಚಿವ ಕೆ.ಎಸ್​ ಈಶ್ವರಪ್ಪ ಹೇಳಿಕೆ

28/11/2020

ಬೆಳಗಾವಿ: ಬೆಳಗಾವಿಯಲ್ಲಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ ಶನಿವಾರ ಹೇಳಿದ್ದು, ಕುರುಬ, ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರಿಗೆ ಕೊಡುತ್ತಿವೋ ಗೊತ್ತಿಲ್ಲ. ಆದರೆ, ಮುಸ್ಲಿಮರಿಗೆ ಮಾತ್ರ ಕೊಡಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ಕುರುಬ ಸಮಾಜ, ಒಕ್ಕಲಿಗರ ಸಮಾಜ, ಲಿಂಗಾಯತ ಸಮಾಜ, ಬ್ರಾಹ್ಮಣ ಸಮಾಜ ಅಂತ ಇಲ್ಲ. ನಾವೆಲ್ಲರೂ ಒಟ್ಟಿಗೆ ಕುಳಿತು ಚರ್ಚೆ ಮಾಡುತ್ತೇವೆ. ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ರಾಜ್ಯ ಪ್ರಮುಖರು, ರಾಷ್ಟ್ರದ ನಾಯಕರು ಒಟ್ಟಿಗೆ ಕುಳಿತುಕೊಂಡು ಚರ್ಚೆ ಮಾಡುತ್ತೇವೆ. ಬೆಳಗಾವಿ ಹಿಂದುತ್ವದ ಕೇಂದ್ರ. ನಾವು ಮುಸ್ಲಿಂರಿಗೆ ಮಾತ್ರ ಕೊಡಲ್ಲ. ಹಿಂದುತ್ವವಾದಿಗೆ ಲೋಕಸಭೆ ಟಿಕೆಟ್ ಕೊಡುತ್ತೇವೆ ಎಂದಿದ್ದಾರೆ.

ಎಲ್ಲಿದೆ ಸಿದ್ದರಾಮಯ್ಯ ವರ್ಚಸ್ಸು?  ಶಿರಾ, ಆರ್​.ಆರ್..​ ನಗರದಲ್ಲಿ ಏನಾಯ್ತು. ಕಾಂಗ್ರೆಸ್ ಇಲ್ಲ ಪಾಪಾ, ಇನ್ನು ಸಿದ್ದರಾಮಯ್ಯ  ಎಲ್ಲಿಂದ?. ಮುಂದಿನ ಚುನಾವಣೆ ಬರಲಿ ಗೊತ್ತಾಗುತ್ತೆ. ಕಳೆದ ಬಾರಿ ಹೇಳ್ತಿದ್ದರಲ್ಲ ಈಗಲೂ ಮುಖ್ಯಮಂತ್ರಿ, ಮುಂದೆಯೂ ಮುಖ್ಯಮಂತ್ರಿ. ಈಗ ಎಲ್ಲಿದ್ದಾರೆ ಸಿದ್ದರಾಮಯ್ಯ. ಬಾದಾಮಿ ಜನರು ಸ್ವಲ್ಪ ಹೆಚ್ಚು ಕಡಿಮೆ ಮಾಡಿದ್ರೆ. ಸಿದ್ದರಾಮಯ್ಯ ರಾಜಕಾರಣದಲ್ಲಿ ಇರುತ್ತಿರಲಿಲ್ಲ ಎಂದು ಅವರು ಲೇವಡಿ ಮಾಡಿದರು.

ಇತ್ತೀಚಿನ ಸುದ್ದಿ