ಮ್ಯಾಟ್ರಿಮೋನಿ, ಶಾದಿ.ಕಾಂನಲ್ಲಿ ಮಹಿಳೆಯನ್ನು ಪರಿಚಯ ಮಾಡಿಕೊಂಡು ಈತ ಮಾಡಿದ್ದೇನು ಗೊತ್ತಾ? - Mahanayaka
7:51 PM Friday 29 - September 2023

ಮ್ಯಾಟ್ರಿಮೋನಿ, ಶಾದಿ.ಕಾಂನಲ್ಲಿ ಮಹಿಳೆಯನ್ನು ಪರಿಚಯ ಮಾಡಿಕೊಂಡು ಈತ ಮಾಡಿದ್ದೇನು ಗೊತ್ತಾ?

28/11/2020

ಬೆಂಗಳೂರು: ಮ್ಯಾಟ್ರಿಮೋನಿ, ಶಾದಿ.ಕಾಂ ನಲ್ಲಿ ಮಹಿಳೆಯರ ಪರಿಚಯ ಮಾಡಿಕೊಂಡು ಬಳಿಕ ಅವರನ್ನು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯೋರ್ವನನ್ನು  ಪೊಲೀಸರು ಬಂಧಿಸಿದ್ದಾರೆ.

ಸ್ವೈನ್ರಾಜ್ ಕಿಶೋರ್ ಬಂಧಿತ ಆರೋಪಿಯಾಗಿದ್ದಾನೆ.  ವಿವಾಹ ಸಂಬಂಧಿತ ಆ್ಯಪ್ ಗಳಲ್ಲಿ ಪರಿಚಯವಾಗಿ ಮದುವೆಯಾಗುವ ಆಮಿಷ ಹಾಕುತ್ತಿದ್ದ ಈತ ಬಳಿಕ ತನ್ನ ಕನ್ಸ್​ಟ್ರಕ್ಷನ್ ವ್ಯವಹಾರಕ್ಕೆ ತುರ್ತು ಹಣದ ಅಗತ್ಯವಿದೆ ಎಂದು ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದ.

ಇತ್ತೀಚೆಗೆ ವೈಟ್ ಫೀಲ್ಡ್ ಮೂಲದ ಯುವತಿಗೆ ಮದುವೆಯಾಗುವುದಾಗಿ ಹೇಳಿ ಸುಮಾರು 24 ಲಕ್ಷ ಜಹಣ ಪಡೆದು ವಂಚಿಸಿದ್ದ. ಈ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ವೈಟ್ ಫೀಲ್ಡ್ ಸಿಇಎನ್ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ