ಮಂತ್ರಿಯಾಗಿದ್ದವನು ಮಾಜಿಯಾಗಿದ್ದೇನೆ, ನನ್ನ ಹಣೆ ಬರಹ ಸರಿಯಿಲ್ಲ | ಎಂಟಿಬಿ ನಾಗರಾಜ್ ಬೇಸರ
ಬೆಂಗಳೂರು: ನಾನು ಮಂತ್ರಿಯಾಗಿದ್ದವ. ಆದರೆ ಈಗ ಮಾಜಿಯಾಗಿದ್ದೇನೆ. ನನ್ನ ಹಣೆ ಬರಹ ಸರಿಯಿಲ್ಲ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ನಿರಾಸೆ ವ್ಯಕ್ತಪಡಿಸಿದ್ದಾರೆ.
ವಿಧಾನಪರಿಷತ್ ಸದಸ್ಯರಾಗಿ ಐದು ತಿಂಗಳಾಯಿತು. ನನಗೆ ಮಂತ್ರಿಯಾಗುವ ಅದೃಷ್ಟ ಕೂಡಿಬಂದಿಲ್ಲ. ಯಾವಾಗ ಅದೃಷ್ಟ ಕೂಡಿಬರುತ್ತದೆಯೋ ಗೊತ್ತಿಲ್ಲ. ನನ್ನ ಹಣೆಬರಹ ಸರಿ ಇಲ್ಲದಿದ್ದಾಗ ಯಾರೂ ಏನು ಮಾಡಲು ಸಾಧ್ಯವಿಲ್ಲ. ಏನೇನಾಗುತ್ತದೆಯೋ ಆಗಲಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದೆಹಲಿಗೆ ಹೋಗೋಣ ಎಂದು ಮುಖ್ಯಮಂತ್ರಿಗೆ ನಾನೇ ಹೇಳಿದ್ದೇನೆ. ಅವರು ಬಿಡುವು ಮಾಡಿಕೊಂಡು ಹೋಗೋಣ ಎಂದು ಹೇಳಿದ್ದಾರೆ. ಸಮಯ ಯಾವಾಗ ಕೂಡಿಬರುತ್ತದೆಯೋ ಗೊತ್ತಿಲ್ಲ. ಅಲ್ಲಿಯ ತನಕ ಕಾಯಲೇಬೇಕಲ್ಲವೆ ಎಂದು ಅವರು ತಮ್ಮ ಅಸಹಾಯಕತೆ ಹೊರ ಹಾಕಿದರು.
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.