ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಯಾವಾಗ?:  ದಿನಾಂಕ ಘೋಷಣೆ - Mahanayaka

ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಯಾವಾಗ?:  ದಿನಾಂಕ ಘೋಷಣೆ

b c nagesh
13/05/2022


Provided by

ಮಡಿಕೇರಿ: ಮೇ 19ರಂದು ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ‌ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಘೋಷಿಸಿದ್ದಾರೆ

ಎಸೆಸೆಲ್ಸಿ ಫಲಿತಾಂಶ ಮೇ ಮೂರನೇ ವಾರದಲ್ಲಿ ಪ್ರಕಟಗೊಳ್ಳಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ನಿರ್ದಿಷ್ಟ ದಿನಾಂಕ ಘೋಷಣೆಯಾಗಿರಲಿಲ್ಲ. ಆದರೆ ಇದೀಗ ಸಚಿವ ಬಿ.ಸಿ ನಾಗೇಶ್ ಅವರು, ಮೇ 19ರಂದು ಎಸ್ ಎಸ್ ಎಲ್  ಸಿ ಫಲಿತಾಂಶವನ್ನು ಘೋಷಣೆ ಮಾಡಲಾಗುತ್ತದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

ಕರ್ನಾಟಕ ಎಸೆಸೆಲ್ಸಿ ಪರೀಕ್ಷೆಯಲ್ಲಿ 8.76 ಲಕ್ಷ ವಿದ್ಯಾರ್ಥಿಗಳ ನೋಂದಣಿಯಾಗಿದೆ. ಮಾರ್ಚ್ 28, 2022 ರಿಂದ ಏಪ್ರಿಲ್ 11, 2022 ರವರೆಗೆ ರಾಜ್ಯದ 3,440 ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು

ಮೇ.19ರಂದು ವಿದ್ಯಾರ್ಥಿಗಳು, ಅಧಿಕೃತ ವೆಬ್ಸೈಟ್ karresults.nic.in ಮತ್ತು sslc.karnataka.gov.in ಗೆ ಭೇಟಿ ನೀಡಿ ತಮ್ಮ ಫಲಿತಾಂಶಗಳನ್ನು ಪಡೆದುಕೊಳ್ಳಬಹುದಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಉತ್ತರ ಪ್ರದೇಶದ ಮದ್ರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ!

ತಂದೆ ಕರೆನ್ಸಿ ಹಾಕಲಿಲ್ಲ ಎಂದು ಖಾಸಗಿ ಭಾಗಕ್ಕೆ ತ್ರಿಶೂಲದಿಂದ ಚುಚ್ಚಿಕೊಂಡ ಯುವಕ!

ಋಷಿ ಕುಮಾರ ಸ್ವಾಮೀಜಿಗೆ ಮಸಿ ಬಳಿದ ಕಿಡಿಗೇಡಿಗಳು!

ಯೋಗ್ಯತೆಗೆ ತಕ್ಕ ಉದ್ಯೋಗ ಸಿಗಲಿಲ್ಲ ಎಂದು ಎಂಬಿಎ ಪದವೀಧರೆ ಆತ್ಮಹತ್ಯೆ

ಈ 3 ವಿಷಯ  ಸರ್ಚ್ ಮಾಡಿದರೆ ನೀವು ಜೈಲು ಸೇರುವುದು ಗ್ಯಾರಂಟಿ!

ಇತ್ತೀಚಿನ ಸುದ್ದಿ