ಚಲಿಸುತ್ತಿದ್ದ ಬಸ್ ನಲ್ಲೇ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಚಾಲಕ, ನಿರ್ವಾಹಕನ ಬಂಧನ - Mahanayaka
6:04 PM Thursday 10 - September 2026

ಚಲಿಸುತ್ತಿದ್ದ ಬಸ್ ನಲ್ಲೇ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಚಾಲಕ, ನಿರ್ವಾಹಕನ ಬಂಧನ

gang-rape.jpg
31/08/2026

ಹೊಸದೆಹಲಿ: ದೆಹಲಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ 16 ವರ್ಷದ 11ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ದಾರಿತಪ್ಪಿ ಸಿಕ್ಕಿಹಾಕಿಕೊಂಡಾಗ, ಚಲಿಸುತ್ತಿದ್ದ ಸ್ಲೀಪರ್ ಬಸ್ ನಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಮೈನ್ ಪುರಿ ಜಿಲ್ಲೆಯ ನಿವಾಸಿಯಾದ ಬಾಲಕಿ, ಕುಟುಂಬದವರೊಂದಿಗೆ ಜಗಳವಾಡಿಕೊಂಡು ತನ್ನ ಸೋದರಮಾವನನ್ನು ಭೇಟಿಯಾಗಲು ನೋಯ್ಡಾಕ್ಕೆ ಹೊರಟಿದ್ದಳು. ಆದರೆ ದೆಹಲಿಯಲ್ಲಿ ಸುರಿಯುತ್ತಿದ್ದ ಭಾರೀ ಮಳೆ ಮತ್ತು ಕತ್ತಲಿನ ಕಾರಣದಿಂದಾಗಿ ಆಕೆ ತಪ್ಪಾಗಿ ಪರಿ ಚೌಕ್ ನಲ್ಲಿ ಬಸ್ ನಿಂದ ಇಳಿದಿದ್ದಳು.
ಮಳೆಯಿಂದ ಆಶ್ರಯ ಪಡೆಯಲು ಮತ್ತು ಸಹಾಯಕ್ಕಾಗಿ ಕಾಯುತ್ತಿದ್ದಾಗ, ಆ ಮಾರ್ಗವಾಗಿ ಬಂದ ಖಾಲಿ ಸ್ಲೀಪರ್ ಬಸ್ ಒಂದನ್ನು ಆಕೆ ಕೈ ಮಾಡಿ ನಿಲ್ಲಿಸಿದ್ದಳು. ಬಸ್ ನ ಚಾಲಕ ಕುಲ್ ದೀಪ್ ಮತ್ತು ನಿರ್ವಾಹಕ ಸಂದೀಪ್, ಬಸ್ ನೋಯ್ಡಾ ಸೆಕ್ಟರ್ 63ರ ಕಡೆಗೆ ಹೋಗುತ್ತದೆ ಎಂದು ಹೇಳಿ ಆಕೆಯನ್ನು ಒಳಗೆ ಹತ್ತಿಸಿಕೊಂಡಿದ್ದಾರೆ.

ಬಸ್ ಚಲಿಸಲು ಶುರುವಾಗುತ್ತಿದ್ದಂತೆ ನಿರ್ವಾಹಕ ಅಸಭ್ಯವಾಗಿ ವರ್ತಿಸಿದ್ದು, ಬಾಲಕಿ ಪ್ರತಿರೋಧಿಸಿದಾಗ ಚಾಲಕ ಹಾಗೂ ನಿರ್ವಾಹಕ ಇಬ್ಬರೂ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ, ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

47 ಕಿ.ಮೀ ಸಂಚರಿಸಿದ ಬಸ್:

ಪರಿ ಚೌಕ್ ನಿಂದ ಕಾಶ್ಮೀರ ಗೇಟ್ ವರೆಗೆ ಸುಮಾರು 47 ಕಿಲೋಮೀಟರ್ ದೂರದವರೆಗೆ ಚಲಿಸುತ್ತಿದ್ದ ಬಸ್ ನಲ್ಲೇ ಈ ಕೃತ್ಯ ಎಸಗಲಾಗಿದೆ. ಬಸ್ ನ ಬರ್ತ್ ಗಳಿಗೆ ಕರ್ಟನ್ ಗಳು ( ಪರದೆಗಳು) ಇದ್ದ ಕಾರಣ ಒಳಗೆ ನಡೆಯುತ್ತಿದ್ದುದು ಹೊರಗಿನವರಿಗೆ ಕಾಣಿಸಿಲ್ಲ. ನಂತರ ರಾತ್ರಿ ವೇಳೆ ಕಾಶ್ಮೀರ ಗೇಟ್ ಬಸ್ ಟರ್ಮಿನಲ್ ಬಳಿಯ ರಿಂಗ್ ರೋಡ್ನಲ್ಲಿ ಬಾಲಕಿಯನ್ನು ಇಳಿಸಿ ಆರೋಪಿಗಳು ಪರಾರಿಯಾಗಿದ್ದಾರೆ.

ಭಯಭೀತರಾದ ವಿದ್ಯಾರ್ಥಿನಿ ನೇರವಾಗಿ ಕಾಶ್ಮೀರ ಗೇಟ್ ಪೊಲೀಸ್ ಠಾಣೆಗೆ ತೆರಳಿ ಘಟನೆಯ ಬಗ್ಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಟಿಮಾರ್ಪುರದ ಬಸ್ ನಿಲುಗಡೆ ಪ್ರದೇಶದಿಂದ ಕುಲ್ ದೀಪ್ ಮತ್ತು ಸಂದೀಪ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಬಸ್ ಅನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti