ಕೊರೊನಾದಿಂದ ತತ್ತರಿಸಿರುವ ಜನತೆಗೆ ಸಿಕ್ಕಿತು ಕೊನೆಗೂ ಸಿಹಿಸುದ್ದಿ | ಈ ವರದಿ ಓದಿ - Mahanayaka

ಕೊರೊನಾದಿಂದ ತತ್ತರಿಸಿರುವ ಜನತೆಗೆ ಸಿಕ್ಕಿತು ಕೊನೆಗೂ ಸಿಹಿಸುದ್ದಿ | ಈ ವರದಿ ಓದಿ

20/10/2020


Provided by

ನವದೆಹಲಿ: ಕೊರೊನಾದಿಂದ ಇಡೀ ವಿಶ್ವವೇ ತತ್ತರಿಸಿದ್ದು, ಲಾಕ್ ಡೌನ್ ಕಾಲ ಎಲ್ಲ ಮುಗಿದರೂ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ದೇಶದಲ್ಲಿ ಕೂಡ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೇ ಸಂದರ್ಭ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಜನತೆಗೆ ಸಿಹಿ ಸುದ್ದಿಯೊಂದು ದೊರೆತಿದೆ.

ಆರೋಗ್ಯ ಸಚಿವಾಲಯ ನೀಡಿರುವ ಈ ಮಾಹಿತಿ ಇದೀಗ ಜನರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಕೊರೊನಾ ಪ್ರಕರಣಗಳ ಸಂಖ್ಯೆಯು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಳಿಕೆಯಾಗುತ್ತಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ ಮೂರು ದಿನಗಳಿಂದ ಸಕ್ರಿಯ ಪ್ರಕರಣಗಳು 8 ಲಕ್ಷಕ್ಕಿಂತಲೂ ಅಧಿಕ ಇಳಿಕೆಯಾಗಿದೆ ಎಂದು ಸಚಿವಾಲಯವು ಹೇಳಿದೆ.

ಇತ್ತೀಚಿನ ಸುದ್ದಿ