ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣರನ್ನು ಟೀಕಿಸುತ್ತಿದ್ದ ದಲಿತ ವಕೀಲನ ಹತ್ಯೆ! - Mahanayaka

ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣರನ್ನು ಟೀಕಿಸುತ್ತಿದ್ದ ದಲಿತ ವಕೀಲನ ಹತ್ಯೆ!

20/10/2020

ರಾಜ್ ಕೋಟ್: ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರನ್ನು ಟೀಕಿಸಿದ ಕಾರಣಕ್ಕೆ ದಲಿತ ವಕೀಲ ದೇವ್ ಜಿ ಮಹೇಶ್ವರಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವಿಶೇಷ ತನಿಖಾ ತಂಡ(ಸಿಟ್) ತನಿಖಾ ವಿವರಗಳನ್ನು ಬಹಿರಂಗಗೊಳಿಸಿದೆ.


Provided by

ಪ್ರಿಂಟರ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುವ ಭರತ್ ರಾವಲ್(22) ಎಂಬಾತ  ಸೆಪ್ಟಂಬರ್ 25ರಂಧು ದಲಿತ ವಕೀಲ ದೇವ್ ಜಿ ಮಹೇಶ್ವರಿ ಅವರನ್ನು ಇರಿದು ಹತ್ಯೆ ಮಾಡಿದ್ದನು.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ಭರತ್ ರಾವಲ್ ನನ್ನು ಬಂಧಿಸಿದ್ದರು.

ಬ್ರಾಹ್ಮಣರನ್ನು ಟೀಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದರಿಂದಾಗಿ ತಾನು ಹತ್ಯೆ ಗೈದಿದ್ದೇನೆ ಎಂದು ವಿಚಾರಣೆಯ ವೇಳೆ ಭರತ್ ರಾವಲ್ ಒಪ್ಪಿಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ 8 ಜನರ ಹೆಸರನ್ನು ಎಫ್ ಐ ಆರ್ ನಲ್ಲಿ ದಾಖಲಿಸಲಾಗಿದ್ದರೂ ಇವರ ಬಗ್ಗೆ ಪುರಾವೆ ಸಂಗ್ರಹಿಸಲು ಪೊಲೀಸರಿಂದ ಇನ್ನೂ ಸಾಧ್ಯವಾಗಿಲ್ಲ.

ಬ್ರಾಹ್ಮಣರನ್ನು ಟೀಕಿಸುತ್ತಿದ್ದ ದೇವ್ ಜಿ ಮಹೇಶ್ವರಿ ಅವರ ಪೋಸ್ಟ್ ಗೆ ಸಂಬಂಧಿಸಿದಂತೆ ಫೋನ್ ನಲ್ಲಿ ತೀವ್ರ ವಾಗ್ವಾದ ಉಂಟಾಗಿತ್ತು. ಈ ವಾಗ್ವಾದದ ಬಳಿಕ ದೇವ್ ಜಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.

ಇತ್ತೀಚಿನ ಸುದ್ದಿ