ಸಂಬಳ ಕಡಿಮೆ ಎಂದು ತನ್ನ ಹುದ್ದೆಗೆ ರಾಜೀನಾಮೆ ನೀಡಲು ಮುಂದಾದ ಈ ದೇಶದ ಪ್ರಧಾನಿ - Mahanayaka

ಸಂಬಳ ಕಡಿಮೆ ಎಂದು ತನ್ನ ಹುದ್ದೆಗೆ ರಾಜೀನಾಮೆ ನೀಡಲು ಮುಂದಾದ ಈ ದೇಶದ ಪ್ರಧಾನಿ

20/10/2020

ಲಂಡನ್:  ಸಂಬಳ ಕಡಿಮೆ ಇದೆ ಎಂದು ಯಾವ್ಯಾವುದೋ ಹುದ್ದೆಗೆ ರಾಜೀನಾಮೆ ನೀಡುವುದನ್ನು ನೀವು ಕೇಳಿದ್ದೀರಿ. ಆದರೆ, ಇಲ್ಲೊಬ್ಬರು ಕಡಿಮೆ ವೇತನ ಸಿಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಹೌದು..! ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ವೇತನ ಕಡಿಮೆ ಇದೆ ಎನ್ನುವ ಕಾರಣಕ್ಕಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರಂತೆ. ಹಿಂದಿನ ವೇತನಕ್ಕೆ ಹೋಲಿಸಿದರೆ, ಈಗ ವೇತನ ಕಡಿಮೆ ನೀಡಲಾಗುತ್ತಿದೆ ಎಂದು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ವಿವಿಧ ಬ್ರಿಟೀಷ್ ಮಾಧ್ಯಮಗಳು ವರದಿ ಮಾಡಿವೆ.

ಬೊರಿಸ್ ಅವರಿಗೆ 6 ಮಕ್ಕಳಿದ್ದಾರೆ. ಈ ಪೈಕಿ ಕೆಲವರು ಚಿಕ್ಕ ಮಕ್ಕಳಾಗಿದ್ದಾರೆ. ಇದಲ್ಲದೇ  ವಿಚ್ಛೇದನ ಒಪ್ಪಂದದ ಪ್ರಕಾರ ಮಾಜಿ ಪತ್ನಿಗೂ ಹಣಪಾವತಿಸಬೇಕಿದೆ. ಹೀಗಾಗಿ ಅವರಿಗೆ ಹಣಕಾಸಿನ ನೆರವು ಅಗತ್ಯವಿದೆ. ಈ ಕಾರಣಕ್ಕಾಗಿ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚಿನ ಸುದ್ದಿ