ಸಹೋದರಿಯ ಬೆತ್ತಲೆ ಚಿತ್ರ ಹೊಂದಿದ್ದ ಯುವಕನನ್ನು ಬರ್ಬರ ಹತ್ಯೆಗೈದ ಸಹೋದರ
ಚಿಕ್ಕಬಳ್ಳಾಪುರ: ಸಹೋದರಿಯ ಬೆತ್ತಲೆ ಚಿತ್ರ ಹೊಂದಿದ್ದ ಆರೋಪದಲ್ಲಿ ಜಗಳದಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತನ್ನ ಸಹೋದರಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋವನ್ನು ಹೊಂದಿದ್ದಕ್ಕೆ ಆಕ್ರೋಶಗೊಂಡಿದ್ದ ದರ್ಶನ್ ತನ್ನ ಸಹಚರ ಆಶ್ರಯ್ ಜೊತೆ ಸೇರಿಕೊಂಡು ದೊಡ್ಡಬಳ್ಳಾಪುರ ಮೂಲದ ನಂದಾ ಎಂಬಾತನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ದೊಡ್ಡಬಳ್ಳಾಫುರ ಮೂಲದ ಯುವಕ ನಂದಾ ಹತ್ಯೆಗೀಡಾಗಿದ್ದು, ಮೃತ ನಂದಾ ಎಂಬಾತ ಇಲ್ಲಿನ ಗ್ರಾಮವೊಂದರ ದರ್ಶನ್ ಎಂಬ ಯುವಕನ ಸಹೋದರಿಯ ಬೆತ್ತಲೆ ವಿಡಿಯೋ ಹೊಂದಿದ್ದ ಎಂಬ ವಿಚಾರಕ್ಕೆ ಆಗಾಗ ಇವರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೀಗ ಇದೇ ಜಗಳ ಬರ್ಬರ ಹತ್ಯೆಯಲ್ಲಿ ಅಂತ್ಯವಾಗಿದೆ ಎನ್ನುವ ಅನುಮಾನಗಳಿಗೆ ಕಾರಣವಾಗಿದೆ.
ಚಿಕ್ಕಬಳ್ಳಾಫುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka




























