ಧಾರಾವಾಹಿ ನಟಿಯ ಸಾವಿಗೆ ಪತಿಯೇ ಕಾರಣ? - Mahanayaka
9:04 PM Wednesday 20 - August 2025

ಧಾರಾವಾಹಿ ನಟಿಯ ಸಾವಿಗೆ ಪತಿಯೇ ಕಾರಣ?

15/12/2020


Provided by

ಚೆನ್ನೈ: ತಮಿಳು ಕಿರುತೆರೆ ನಟಿ ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು, ನಟಿ ಚಿತ್ರಾ ಅವರ ಪತಿಯನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ. ಚಿತ್ರಾ ಅವರ ತಾಯಿಯ ಹೇಳಿಕೆಯ ಬಳಿಕ ಚಿತ್ರಾಳ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೇಮಂತ್ ಬಂಧಿತ ಆರೋಪಿಯಾಗಿದ್ದಾನೆ. ಕಿರುತೆರೆಯಲ್ಲಿ ಚಿತ್ರಾ ನಟಿಸಿದ್ದ ನಿಕಟ ದೃಶ್ಯಗಳು ಆತನಿಗೆ ಇಷ್ಟವಿರಲಿಲ್ಲ. ಈ ಕಾರಣಕ್ಕೆ ಜಗಳ ನಡೆದು ಹೇಮಂತ್ ಚಿತ್ರಾ ಅವರನ್ನು ನೂಕಿದ್ದ ಎಂದು ಎಸಿಪಿ ಸುದರ್ಶನ್ ತಿಳಿಸಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

ನನ್ನ ಮಗಳಿಗೆ ಆಕೆಯ ಪತಿ ಹೇಮಂತ್ ಸಾಯುವ ಹಾಗೆ ಹೊಡೆದಿದ್ದ ಎಂದು ನಟಿಯ ತಾಯಿ ಆರೋಪಿಸಿದ್ದರು. ಇದಾಗಿ ಒಂದು ದಿನದೊಳಗೆ ಹೇಮಂತ್ ಅವರನ್ನು ಬಂಧಿಸಲಾಗಿದೆ.

ಡಿಸೆಂಬರ್ 10ರಂದು ಚೆನ್ನೈನ ಹೊರ ವಲಯದ ಹೊಟೇಲ್ ನಲ್ಲಿ ತಮಿಳು ಧಾರಾವಾಹಿ ನಟಿ ಚಿತ್ರ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

 

ಇತ್ತೀಚಿನ ಸುದ್ದಿ