ಉತ್ತರಪ್ರದೇಶ ಚುನಾವಣೆಯಲ್ಲಿ ನಾವು ಸ್ಪರ್ಧಿಸುತ್ತೇವೆ | ಅರವಿಂದ ಕೇಜ್ರಿವಾಲ್ - Mahanayaka

ಉತ್ತರಪ್ರದೇಶ ಚುನಾವಣೆಯಲ್ಲಿ ನಾವು ಸ್ಪರ್ಧಿಸುತ್ತೇವೆ | ಅರವಿಂದ ಕೇಜ್ರಿವಾಲ್

15/12/2020

ನವದೆಹಲಿ: ಉತ್ತಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ-2022ಯಲ್ಲಿ ಭಾಗವಹಿಸಲು ಆಮ್ ಆದ್ಮಿ ಪಕ್ಷ ಉತ್ಸಾಹ ತೋರಿದ್ದು, ಇಂದು ಈ ವಿಚಾರವನ್ನು ದೆಹಲಿ ಸಿಎಂ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೇ ತಿಳಿಸಿದ್ದಾರೆ.

 

ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ನೀಡಿದ ಮಾತಿಗೆ ತಕ್ಕಂತೆಯೇ ಆಡಳಿತ ನಡೆಸಿದೆ. ನೆರೆಯ ರಾಜ್ಯದಲ್ಲಿ ಕೂಡ ಎಎಪಿಯನ್ನು ಜನರು ಬೆಂಬಲಿಸಿದ್ದಲ್ಲಿ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡುತ್ತೇವೆ ಎಂದು ಅರವಿಂದ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ.

 

ದೆಹಲಿಯಲ್ಲಿ ಮೂರನೇ ಬಾರಿಗೆ ಅಧಿಕಾರ ಪಡೆದ ಎಎಪಿಯು ಇದೀಗ ತನ್ನ ಅಧಿಕಾರವನ್ನು ವಿಸ್ತರಣೆ ಮಾಡಲು ಮುಂದಾಗಿದ್ದು, ಉತ್ತರ ಪ್ರದೇಶಕ್ಕೂ ಹೆಜ್ಜೆ ಇಟ್ಟಿದೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಅಮಾನವೀಯ ಸರ್ಕಾರದ ದುರ್ನಡತೆಗಳು ಎಎಪಿಗೆ ವರವಾಗುವ ಸಾಧ್ಯತೆಗಳೂ ಇವೆ. ಇನ್ನೊಂದೆಡೆಯಲ್ಲಿ ಅಸಾದುದ್ದೀನ್ ಓವೈಸಿ ಕೂಡ ಉತ್ತರಪ್ರದೇಶ ರಾಜಕೀಯಕ್ಕೆ ಕೈ ಹಾಕಿದ್ದಾರೆ.

 

ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆಗಳು ಕಂಡು ಬರುತ್ತಿದೆ. ಈ ಬಾರಿ ಉತ್ತರಪ್ರದೇಶ ಚುನಾವಣೆ ಮತದಾರನನ್ನೇ ಗೊಂದಲಕ್ಕೀಡು ಮಾಡುವಂತೆ ಕಂಡು ಬರುತ್ತಿದೆ.

ಇತ್ತೀಚಿನ ಸುದ್ದಿ