ಚಾಮರಾಜನಗರದಲ್ಲಿ ಮಂಜಿನ ಚಾದರ | ಚುಮುಚುಮು ಚಳಿ ಕಾಡಲ್ಲಿ ಹಸಿರಿನ ಕಚಗುಳಿ - Mahanayaka
6:08 PM Wednesday 22 - October 2025

ಚಾಮರಾಜನಗರದಲ್ಲಿ ಮಂಜಿನ ಚಾದರ | ಚುಮುಚುಮು ಚಳಿ ಕಾಡಲ್ಲಿ ಹಸಿರಿನ ಕಚಗುಳಿ

fog in chamarajanagar
29/11/2022

ಚಾಮರಾಜನಗರ: ಕಾಡಿನ ಐಸಿರಿಯಿಂದ ಕಂಗೊಳಿಸುವ ಗಡಿಜಿಲ್ಲೆ ಚಾಮರಾಜನಗರದಲ್ಲಿ ಈಗ ಎಲ್ಲಿ ನೋಡಿದರಲ್ಲಿ ಮಂಜಿನ ಮಯ. ಜಿಲ್ಲಾಧ್ಯಂತ ಚುಮುಚುಮು ಚಳಿ ಹೆಚ್ಚಾಗಿದ್ದು ಬೆಳಗ್ಗೆ 8–9 ಆದರೂ ಮಂಜು ಮುಸುಕಿದ ವಾತಾವರಣ.

ಹೌದು..  ಚಾಮರಾಜನಗರ ಜಿಲ್ಲೆಯಲ್ಲಿ ಮುಂಜಾನೆ ಮಂಜಿನ ಸೊಬಗು ಮೇಳೈಸಿದ್ದು, ಬೆಳಗ್ಗೆ ಒಂಭತ್ತಾದರೂ ದಟ್ಟನೆಯ ಮಂಜು ಚಳಿಯ ಕಚಗುಳಿ ಇಡುತ್ತಿದೆ. ಅರಣ್ಯ ಪ್ರದೇಶದಲ್ಲಂತೂ ಸ್ವರ್ಗವೇ ಧರೆಗಿಳಿದಂತೆ ಪ್ರಕೃತಿಯ ಚೆಲುವು ಕಂಗೊಳಿಸುತ್ತಿದೆ.

ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹಾಗೂ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಸ್ವಾಮಿ ಬೆಟ್ಟದಲ್ಲಂತೂ ಹಸಿರಿಗೆ ಮಂಜಿನ ಚಾದರ ಹೊದ್ದಂತೆ ಕಾಣಿಸುತ್ತಿದೆ.

ಬೆಳಗ್ಗೆ 9 ಆದರೂ  ಮಂಜಿನ ತೆರೆ ಮರೆಯಾಗದಿರುವುದರಿಂದ ಲೈಟ್ ಗಳನ್ನು ಹಾಕಿ ವಾಹನ ಚಾಲಾಯಿಸುತ್ತಿದ್ದಾರೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದಟ್ಟನೆಯ ಮುಂಜಾನೆ ಮಂಜಿನ ಅನುಭವ ವನ್ನು ಜನರು ಪಡೆಯುತ್ತಿದ್ದಾರೆ.  ಜಿಲ್ಲೆಗೆ ಆಗಮಿಸಿರುವ  ಪ್ರವಾಸಿಗರಿಗೆ ಮಂಜು ಹಾಗೂ ಹಸಿರು ಮತ್ತಷ್ಟು ಖುಷಿ ನೀಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ