ಕೊನೆಗೂ 'ಕೈ' ಬಿಟ್ಟ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ: 'ಕಮಲ' ಹಿಡಿತಾರ ಚೌಹಾಣ್..? - Mahanayaka
12:39 AM Friday 19 - December 2025

ಕೊನೆಗೂ ‘ಕೈ’ ಬಿಟ್ಟ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ: ‘ಕಮಲ’ ಹಿಡಿತಾರ ಚೌಹಾಣ್..?

12/02/2024

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮಹಾರಾಷ್ಟ್ರದ ಅಶೋಕ್ ಚೌಹಾಣ್ ಅವರು ತಮ್ಮ ಶಾಸಕ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ, ಇದಕ್ಕೆ ಪೂರಕವಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಫಡ್ನವಿಸ್ ಅವರು ಹೇಳಿಕೆ ನೀಡಿದ್ದಾರೆ.

ಇನ್ನು‌ ಚವಾಣ್ ಅವರ ಬೆನ್ನಿಗೆ ಕಾಂಗ್ರೆಸ್ಸಿನಿಂದ ಇನ್ನೂ ಹಲವು ಪ್ರಮುಖ ಮುಖಂಡರು ಬಿಜೆಪಿ ಸೇರುವ ಸೂಚನೆಯನ್ನು ಫಡ್ನವಿಸ್ ನೀಡಿದ್ದಾರೆ. ಇತರ ಪಕ್ಷಗಳ ಪ್ರಮುಖ ಮುಖಂಡರು ಬಿಜೆಪಿ ಸೇರುವುದಕ್ಕೆ ಬಯಸುತ್ತಿದ್ದಾರೆ. ವಿಶೇಷವಾಗಿ ಕೆಲವು ಪ್ರಮುಖ ಕಾಂಗ್ರೆಸ್ ನಾಯಕರು ನಮ್ಮನ್ನು ಸಂಪರ್ಕಿಸಿದ್ದಾರೆ. ಅವರ ಪಕ್ಷದಲ್ಲಿ ಅವರಿಗೆ ಉಸಿರುಗಟ್ಟುತ್ತಿದೆ ಅನ್ನುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಫಲಿತಾಂಶ ಗೋಚರವಾಗಲಿದೆ ಎಂದವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ