'ವಿಶ್ವಾಸ' ಗೆದ್ದ ನಿತೀಶ್ ಕುಮಾರ್ ನೇತೃತ್ವದ ಎನ್.ಡಿ.ಎ ಸರಕಾರ: ಮಹಾಘಟಬಂಧನ್ ಗೆ ಭಾರಿ ಮುಖಭಂಗ ಆಗಿದ್ದೇಗೆ..? - Mahanayaka
1:09 AM Tuesday 27 - February 2024

‘ವಿಶ್ವಾಸ’ ಗೆದ್ದ ನಿತೀಶ್ ಕುಮಾರ್ ನೇತೃತ್ವದ ಎನ್.ಡಿ.ಎ ಸರಕಾರ: ಮಹಾಘಟಬಂಧನ್ ಗೆ ಭಾರಿ ಮುಖಭಂಗ ಆಗಿದ್ದೇಗೆ..?

12/02/2024

ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್.ಡಿ.ಎ ಸರಕಾರ ವಿಶ್ವಾಸಮತ ಗೆದ್ದುಕೊಂಡಿದೆ. ಅದರಲ್ಲೂ ವಿಶ್ವಾಸ ಮತಯಾಚನೆಗಿಂತ ಸ್ವಲ್ಪ ಮೊದಲು ಆರ್ ಜೆಡಿಯ ಮೂವರು ಶಾಸಕರು ನಿತೀಶ್ ಕುಮಾರ್ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಮಹಾಘಟಬಂಧನ್ ಗೆ ಭಾರಿ ಮುಖಭಂಗ ಎದುರಾಗಿದೆ.

ಪೂರ್ಣ ಬಹುಮತಕ್ಕೆ 122 ಮತಗಳು ಬೇಕಾಗಿದ್ದು ನಿತೀಶ್ ಕುಮಾರ್ ಅವರು 129 ಮತಗಳನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ.. ಈ ನಡುವೆ ಐದು ಮಂದಿ ಆರ್‌ಜೆಡಿ ಶಾಸಕರು ಕೂಡ ನಿತೀಶ್ ಪರವಾಗಿ ಮತ ಚಲಾಯಿಸಿದ್ದಾರೆ. ವಿಶ್ವಾಸ ಮತಕ್ಕಿಂತಲೂ ಮೊದಲು ಮಾಜಿ ಉಪಮುಖ್ಯಮಂತ್ರಿ ಮತ್ತು ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದವು.

ಇತ್ತೀಚಿನ ಸುದ್ದಿ