ಹೋಳಿ ಹೆಸರಿನಲ್ಲಿ ರಸ್ತೆಯಲ್ಲೇ ಯುವತಿಯರ ಪೋಲಿಯಾಟ: ವಿಡಿಯೋ ವೈರಲ್ - Mahanayaka
12:19 PM Tuesday 18 - November 2025

ಹೋಳಿ ಹೆಸರಿನಲ್ಲಿ ರಸ್ತೆಯಲ್ಲೇ ಯುವತಿಯರ ಪೋಲಿಯಾಟ: ವಿಡಿಯೋ ವೈರಲ್

hollie
26/03/2024

ನೋಯ್ಡಾ: ಹೋಳಿಯನ್ನು ಒಂದೆಡೆ ಕೆಲವು ವರ್ಗ ಸಂಸ್ಕೃತಿ ಎಂದು ಹೇಳುತ್ತಿದೆ. ಆದ್ರೆ ಹೋಳಿ ದಿನ ನಡೆಸುತ್ತಿರುವ ಹುಚ್ಚಾಟಗಳು ಇದೆಲ್ಲ ಸಂಸ್ಕೃತಿಯೇ ವಿಕೃತಿಯೇ ಅಂತ ಪ್ರಶ್ನಿಸುವಂತೆ ಮಾಡಿದೆ.

ಉತ್ತರ ಪ್ರದೇಶದಲ್ಲಿ ಹೋಳಿ ಸಂದರ್ಭದಲ್ಲಿ ಇಬ್ಬರು ಯುವತಿಯರು ಹೋಳಿ ಸಂದರ್ಭದಲ್ಲಿ ಅಸಭ್ಯವಾದ ರೀಲ್ಸ್ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ಕೂಟರ್ ಹಿಂಭಾಗದಲ್ಲಿ ಮುಖಾಮುಖಿಯಾಗಿ ಕುಳಿತಿದ್ದು, ಓರ್ವ ಯುವಕ ಸ್ಕೂಟರ್ ಚಲಾಯಿಸುತ್ತಿದ್ದಾನೆ. ಹಿಂದೆ ಕುಳಿತಿರುವ ಯುವತಿಯರು ಹೋಳಿಯ ಬಣ್ಣ ಹಚ್ಚಿಕೊಂಡು ಪೋಲಿ ಆಟದಲ್ಲಿ ತೊಡಗಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಸಾರ್ವಜನಿಕ ರಸ್ತೆಯಲ್ಲೇ ಯುವತಿಯರ ಈ ವರ್ತನೆಗೆ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಉತ್ತರ ಪ್ರದೇಶ ಪೊಲೀಸರು ಎಚ್ಚೆತ್ತುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು 30 ಸಾವಿರ ರೂಪಾಯಿ ದಂಡ ವಿಧಿಸಲು ಮುಂದಾಗಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ