ಲೋಕ ಕಣ: ಬಿಜೆಪಿಗೆ ದೊಡ್ಡ ಆಘಾತ ನೀಡಿದ ರಜಪೂತರು

ಲೋಕಸಭಾ ಚುನಾವಣೆಯಲ್ಲಿ ರಜಪೂತರು ಬಿಜೆಪಿಗೆ ದೊಡ್ಡ ಆಘಾತ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆಯುವ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ. ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸದೇ ಇರುವುದಕ್ಕೆ ನಿರುದ್ಯೋಗದ ಏರಿಕೆ, ಅಗ್ನಿವೀರ್ ಯೋಜನೆಗೆ ವಿರೋಧ ಮತ್ತು ರಜಪೂತ ಸಮಾಜಕ್ಕೆ ಅವಮಾನಿಸಿದ್ದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆದರೆ ಈ ಬಹಿಷ್ಕಾರವು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರಿಗೆ ಅನ್ವಯವಾಗುವುದಿಲ್ಲ ಎಂದು ಮಂಗಳವಾರ ಮುಝಫ್ಫರಪುರ್ ಲೋಕಸಭಾ ಕ್ಷೇತ್ರದ ಖೇಡಾ ಗ್ರಾಮದಲ್ಲಿ ನಡೆದ ರಜಪೂತ ಸಮುದಾಯದ ಮಹಾಪಂಚಾಯತ್ ನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಆದಿತ್ಯನಾಥ್ ತಮ್ಮ ದನಿಯಾಗಿದ್ದಾರೆ ಆದರೆ ಈ ದನಿಯನ್ನು ಕೇಂದ್ರ ಬಿಜೆಪಿ ನಾಯಕತ್ವ ಆಲಿಸುತ್ತಿಲ್ಲ ಎಂದು ಮಹಾಪಂಚಾಯತ್ ಹೇಳಿದೆ.
ರಜಪೂತರ ಪ್ರಭಾವ ಅಧಿಕವಾಗಿರುವ ಸಿವಾಲಿ ಖಸ್ (ಭಾಗಪತ್), ಸರ್ಧಾನ (ಮೀರತ್) ಮತ್ತು ಖತೌಲಿ (ಮುಝಫ್ಫರಪುರ್) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 24 ಗ್ರಾಮಗಳ ಸಂಘಟನೆ ʻಚೌಬೀಸಿʼ ಈ ಮಹಾಪಂಚಾಯತ್ ಅನ್ನು ಆಯೋಜಿಸಿತ್ತು.
ಮುಝಫ್ಫರನಗರದಲ್ಲಿ ಎಸ್‌ಪಿ ಅಬ್ಯರ್ಥಿ ಹರೇಂದ್ರ ಮಲಿಕ್‌ಗೆ ಬೆಂಬಲವನ್ನು ಮಹಾಪಂಚಾಯತ್ ಘೋಷಿಸಿದೆ. ಇತರ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯವಿರುವ ಅಭ್ಯರ್ಥಿಗೆ ಮತ ನೀಡುವುದಾಗಿಯೂ ಮಹಾಪಂಚಾಯತ್ ಪ್ರಮುಖರು ಹೇಳಿದರು. ಮಾಜಿ ಪ್ರಧಾನಿಗಳಾದ ವಿ ಪಿ ಸಿಂಗ್ ಮತ್ತು ರಜಪೂತ ಸಮುದಾಯದ ಚಂದ್ರಶೇಖರ್ ಅವರಿಗೇಕೆ ಭಾರತ ರತ್ನ ನೀಡಿಲ್ಲ ಎಂದೂ ಪ್ರಶ್ನಿಸಲಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth