ಇನ್ನಿಲ್ಲ: 317 ಕಿಲೋ ತೂಗುವ ಲಂಡನ್ನಿನ ವ್ಯಕ್ತಿ ನಿಧನ - Mahanayaka
12:47 PM Saturday 23 - August 2025

ಇನ್ನಿಲ್ಲ: 317 ಕಿಲೋ ತೂಗುವ ಲಂಡನ್ನಿನ ವ್ಯಕ್ತಿ ನಿಧನ

06/05/2024


Provided by

317 ಕಿಲೋ ತೂಗುವ ವ್ಯಕ್ತಿಯಾಗಿ ಜಾಗತಿಕವಾಗಿ ಗಮನ ಸೆಳೆದಿದ್ದ ಲಂಡನ್ನಿನ 34ರ ಹರೆಯದ ಜಾನ್ ಸನ್ ಹಾರ್ಟನ್ ನಿಧನರಾಗಿದ್ದಾರೆ. ಇವರು ಜಗತ್ತಿನ ಅತಿ ಭಾರದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಅವರ ಚಿತ್ರ ಮತ್ತು ಅವರ ಕುರಿತಾದ ಮಾಹಿತಿಗಳು ವಿದೇಶಿ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

ಆರಂಭದಲ್ಲಿ ಇವರ ಕಿಡ್ನಿ ಕೆಲಸ ಮಾಡುವುದನ್ನು ನಿಲ್ಲಿಸಿತು. ಆ ಬಳಿಕ ಬಹು ಅಂಗಾಂಗ ವೈಫಲ್ಯಕ್ಕೆ ಇವ್ರು ಒಳಗಾದರು ಎಂದು ಅವರ ತಾಯಿ ತಿಳಿಸಿದ್ದಾರೆ. ಇವರು ನಿಧನರಾಗುತ್ತಾರೆ ಎಂಬುದನ್ನು ವೈದ್ಯರು ಮೊದಲೇ ತಿಳಿಸಿದ್ದರು ಎಂದು ಕೂಡ ಅವರು ತಿಳಿಸಿದ್ದಾರೆ.
ಹದಿಹರೆಯದಲ್ಲಿ ಈ ಜಾನ್ಸನ್ ಅವರ ತಂದೆ ನಿಧನರಾದರು.

ಆ ಬಳಿಕ ಇವರು ಅಮಿತತವಾಗಿ ಆಹಾರ ಸೇವನೆಗೆ ತೊಡಗಿದರು. ಪ್ರತಿದಿನ 10,000 ಕ್ಯಾಲರಿಯ ಆಹಾರವನ್ನು ಸೇವಿಸತೊಡಗಿದರು. ಕಬಾಬ್ ಸೇವನೆ ಯೊಂದಿಗೆ ಇವರ ಬೆಳಗಿನ ಆಹಾರ ಪ್ರಾರಂಭವಾಗುತ್ತಿತ್ತು. ನನ್ನ ದಿನಗಳು ಮುಗಿಯಿತೆಂದು ನಾನು ಭಾವಿಸುತ್ತೇನೆ, ನನಗೆ 34 ವರ್ಷಗಳಾಯಿತು ಎಂದು ಕಳೆದ ವರ್ಷ ಈತ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

2020ರಲ್ಲಿ ಇವರು ತಮ್ಮ ಫ್ಲ್ಯಾಟ್ ನಲ್ಲಿ ಕುಸಿದು ಬಿದ್ದಿದ್ದರು. 30ಕ್ಕಿಂತಲೂ ಅಧಿಕ ಅಗ್ನಿಶಾಮಕ ದಳದ ಪಡೆಯೊಂದಿಗೆ ಒಂದು ಕ್ರೈನ್ ಸಹಾಯದಿಂದ ಇವರನ್ನು ಎದ್ದು ನಿಲ್ಲಿಸಲಾಗಿತ್ತು. ನನ್ನ ಬದುಕಿನ ಅತ್ಯಂತ ವಿಷಾದ ಪೂರ್ವಕ ದಿನ ಎಂದು ಆ ಸನ್ನಿವೇಶವನ್ನು ಅವರು ವಿವರಿಸಿದ್ದರು. ಆ ಬಳಿಕ ಹಲವು ಬಾರಿ ಹೃದಯಾಘಾತ ಕೂಡ ಸಂಭವಿಸಿತು. ಇತ್ತೀಚಿನ ಕೆಲವು ದಿನಗಳಿಂದ ಆತ ಅಲುಗಾಡುವುದಕ್ಕೂ ಸಾಧ್ಯವಾಗದೆ ಹಾಸಿಗೆ ಗೆ ಸೀಮಿತವಾಗಿದ್ದರು. ಉಸಿರಾಟವು ಕಷ್ಟಕರವಾಗಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ